ಕರ್ನಾಟಕ

karnataka

ETV Bharat / state

ಬಿಎಸ್​ವೈ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಅಶೋಕ್‌ಗೆ ಮತ್ತೆ ಒಲಿದ ಗೃಹ ಖಾತೆ - ಮುಖ್ಯಮಂತ್ರಿ

ಖಾತೆಗಳ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಅದರಂತೆ ಖಾತೆಗಳ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎಂದು ಸಿಎಂ ಅಂತಿಮಗೊಳಿಸಿದ್ದಾರೆ.

ಬಿಎಸ್​ವೈ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

By

Published : Aug 20, 2019, 11:11 PM IST

Updated : Aug 20, 2019, 11:40 PM IST

ಬೆಂಗಳೂರು: ಸಚಿವ ಸಂಪುಟ ರಚನೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಖಾತೆಗಳ ಹಂಚಿಕೆಯ ಚಿಂತನೆಯಲ್ಲಿ ತೊಡಗಿದ್ದಾರೆ. ಯಾರಿಗೆ ಯಾವ ಖಾತೆ ಎಂದು ಅಳೆದು ತೂಗುತ್ತಿದ್ದಾರೆ.

ಸಚಿವರ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ಅನುಮತಿಗೆ ಕಾಯಬೇಕಿದ್ದ ಸಿಎಂ, ಖಾತೆಗಳ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಅಭಿಪ್ರಾಯಕ್ಕೆ ಕಾಯಬೇಕಿಲ್ಲ. ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎಂದು ಸಿಎಂ ಅಂತಿಮಗೊಳಿಸಿದ್ದಾರೆ. ನಾಳೆ ಅಧಿಕೃತವಾಗಿ ಖಾತೆಗಳ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗುತ್ತದೆ ಎನ್ನಲಾಗಿದೆ.

ಮಾಜಿ ಸಿಎಂ ಶೆಟ್ಟರ್‌ಗೆ ಕಂದಾಯ ಇಲಾಖೆ ಸಿಗಲಿದ್ದು, ಮಾಜಿ‌ ಡಿಸಿಎಂ ಹೆಗಲಿಗೆ ಗೃಹ ಖಾತೆ ಜವಾಬ್ದಾರಿ ಸಿಗಲಿದೆ ಎನ್ನುವ ಮಾತುಗಳು ಸಿಎಂ ಕಚೇರಿಯ ಮೂಲಗಳಿಂದ ತಿಳಿದುಬಂದಿದೆ.

ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ:

  1. ಆರ್.ಅಶೋಕ್ - ಗೃಹ ಸಚಿವ, ಬೆಂಗಳೂರು ಅಭಿವೃದ್ಧಿ ಸಚಿವ
  2. ಕೆ.ಎಸ್.ಈಶ್ವರಪ್ಪ - ಲೋಕೋಪಯೋಗಿ ಸಚಿವ
  3. ಜಗದೀಶ್ ಶೆಟ್ಟರ್ - ಕಂದಾಯ ಸಚಿವ
  4. ಶ್ರೀರಾಮುಲು - ಸಮಾಜ ಕಲ್ಯಾಣ ಸಚಿವ
  5. ಗೋವಿಂದ ಕಾರಜೋಳ - ಜಲ ಸಂಪನ್ಮೂಲ ಸಚಿವ
  6. ಸಿ.ಟಿ ರವಿ - ಉನ್ನತ ಶಿಕ್ಷಣ, ಅರಣ್ಯ ಇಲಾಖೆ ಸಚಿವ
  7. ಜೆ.ಸಿ ಮಾಧುಸ್ವಾಮಿ - ಕೃಷಿ ಇಲಾಖೆ ಸಚಿವ
  8. ಡಾ.ಅಶ್ವಥ್‍ನಾರಾಯಣ್ - ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ
  9. ಲಕ್ಷ್ಮಣ ಸವದಿ - ಸಕ್ಕರೆ, ತೋಟಗಾರಿಕೆ ಇಲಾಖೆ ಸಚಿವ
  10. ಸುರೇಶ್ ಕುಮಾರ್ - ಕಾನೂನು, ಸಂಸದೀಯ, ಪ್ರಾಥಮಿಕ ಶಿಕ್ಷಣ ಸಚಿವ
  11. ವಿ.ಸೋಮಣ್ಣ - ವಸತಿ,ನಗಾರಭಿವೃದ್ಧಿ ಇಲಾಖೆ ಸಚಿವ
  12. ಬಸವರಾಜ ಬೊಮ್ಮಾಯಿ - ಗ್ರಾಮೀಣ ಅಭಿವೃದ್ಧಿ ಸಚಿವ
  13. ಕೋಟಾ ಶ್ರೀನಿವಾಸ್ ಪೂಜಾರಿ - ಮುಜುರಾಯಿ, ಬಂದರು, ಮೀನುಗಾರಿಕೆ ಸಚಿವ
  14. ಸಿ.ಸಿ.ಪಾಟೀಲ್ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
  15. ನಾಗೇಶ್ - ಸಣ್ಣ ಕೈಗಾರಿಕೆ, ಕಾರ್ಮಿಕ ಇಲಾಖೆ ಸಚಿವ
  16. ಪ್ರಭು ಚೌಹಾಣ್ - ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ
  17. ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ
Last Updated : Aug 20, 2019, 11:40 PM IST

ABOUT THE AUTHOR

...view details