ಬೆಂಗಳೂರು : ಬಂಡಾಯದ ಕವಿ ಡಾ. ಸಿದ್ದಲಿಂಗಯ್ಯ ಅವರಿಗೂ ಐಸಿಯು ಬೆಡ್ ಸಿಗದಿರುವುದು ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಹಾಸಿಗೆ ಸಮಸ್ಯೆ ಇರೋದು ಇದೀಗ ಮತ್ತೆ ಮತ್ತೆ ದೃಢವಾಗುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಕೊರೊನಾ ವೈರಸ್ನಿಂದ ಬಳಲುತ್ತಿರುವ ಡಾ. ಸಿದ್ದಲಿಂಗಯ್ಯ (67 ವರ್ಷ) ಅವರಿಗೆ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಂಡು ಬಂದಿರುವುದರಿಂದ ಈಗ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಆದರೆ, ನಿನ್ನೆಯಿಂದ ರಂಗದೊರೆ ಹಾಸ್ಪಿಟಲ್, ಅಪೋಲೋ ಹಾಸ್ಪಿಟಲ್‌ಗೆ ಭೇಟಿ ನೀಡಿದರೂ ಬೆಡ್ ವ್ಯವಸ್ಥೆ ಆಗಿರಲಿಲ್ಲ.
ಹೀಗಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಅರುಣ್ ಜಾವಗಲ್ ಎಂಬುವರು ಟ್ವೀಟ್ ಮಾಡಿದ್ದು, ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರಿಗೆ ತುರ್ತು ಐಸಿಯು ಬೆಡ್ ಬೇಕಿದೆ.
ದಯವಿಟ್ಟು ಎಲ್ಲಾದರೂ ಐಸಿಯು ಬೆಡ್ ಇದ್ದರೆ ತಿಳಿಸಿ ಎಂದು ಸಚಿವ ಸುಧಾಕರ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈಗ ಐಸಿಯುನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಡಾ. ಸಿದ್ಧಲಿಂಗಯ್ಯ ಅವರಿಗೆ ಬೆಡ್ ಸಿಕ್ಕಿದೆ.
ಓದಿ:ಚಾಮರಾಜನಗರ: ಮಿನಿಸ್ಟರ್ ಪ್ರೆಸ್ಮೀಟ್ ಬಳಿಕ ಹೈಡ್ರಾಮ.. ಸಾವಿನ ಸಂಖ್ಯೆಗಳೇ ಸುಳ್ಳೆಂದ ಕೈ ಶಾಸಕರು..!