ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಂಘ ಸಂಸ್ಥೆಗಳ ಅಥವಾ ಖಾಸಗಿ ವ್ಯಕ್ತಿಗಳ ಫೋಟೋ ಲಗತ್ತಿಸಬಾರದು ಎಂಬ ಕಡ್ಡಾಯ ನಿಯಮವಿದೆ. ಆದ್ರೂ ಕಾನೂನುಬಾಹಿರವಾಗಿ ಆರ್ಎಸ್ಎಸ್ ಸಂಘಟನೆ ಮುಖಂಡರ ಫೋಟೋಗಳನ್ನು ಬಿಬಿಎಂಪಿ ಕಚೇರಿಯಲ್ಲಿ ಇಟ್ಟು ಪೂಜಿಸುತ್ತಿರುವ ವಿಚಾರ ಗೊತ್ತಾಗಿದೆ.
ಇತ್ತೀಚೆಗಷ್ಟೇ ಬಿಬಿಎಂಪಿಯ ಆಡಳಿತ ಪಕ್ಷದ ನಾಯಕನಾಗಿ ಆರ್ಎಸ್ಎಸ್ ಹಿನ್ನೆಲೆಯುಳ್ಳ ಜಕ್ಕೂರು ವಾರ್ಡ್ನ ಮುನೀಂದ್ರ ಕುಮಾರ್ ಅವರನ್ನು ಸಂಘದ ಸೂಚನೆ ಮೇರೆಗೆ ಆಯ್ಕೆ ಮಾಡಲಾಗಿತ್ತು. ಇಂದು ಕಚೇರಿ ಪೂಜೆ ವೇಳೆ, ದೇವರ ಫೋಟೋದೊಂದಿಗೆ ಆರ್ಎಸ್ಎಸ್ ಸಂಸ್ಥಾಪಕರಾದ ಕೆ.ಬಿ. ಹೆಡಗೆವಾರ್, ಎಮ್. ಎಸ್. ಗೋಲ್ವಾಲ್ಕರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಗಿದೆ. ಜೊತೆಗೆ ಆರ್ಎಸ್ಎಸ್ ಸಂಘ ಪೂಜಿಸುವ ಭಾರತ ಮಾತೆಯ ಫೋಟೋ ಕೂಡಾ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.