ಬೆಂಗಳೂರು: ದೇಹಾರೊಗ್ಯ ವೃದ್ಧಿಸಲು 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆಯ ಕೋರಮಂಗಲದ ಕೆ.ಎಸ್. ಆರ್. ಪಿ. ಮೈದಾನದಲ್ಲಿ ಯೋಗ ತರಬೇತಿ ನಡೆಸಲಾಯ್ತು.
ದೇಹಾರೋಗ್ಯ ವೃದ್ಧಿಸಲು ಕೆ.ಎಸ್. ಆರ್. ಪಿ. ಮೈದಾನದಲ್ಲಿ ಪೊಲೀಸರಿಗೆ ಯೋಗ ತರಬೇತಿ - ಕೆ.ಎಸ್ ಆರ್ ಪಿ ಮೈದಾನದಲ್ಲಿ ವಿಶ್ವ ಯೋಗ ದಿನ ಆಚರಣೆ ಸುದ್ದಿ
ಸ್ವತಃ ಕೆ.ಎಸ್ ಆರ್ ಪಿ ಸಿಬ್ಬಂದಿಗೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪ್ರಾಣಾಯಾಮ, ಸೂರ್ಯ ನಮಸ್ಕಾರವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಹಲವು ಆಸನಗಳ ತರಬೇತಿಯನ್ನು ನಡೆಸಲಾಯ್ತು.
ಕೆ.ಎಸ್ ಆರ್ ಪಿ ಮೈದಾನದಲ್ಲಿ ಪೊಲೀಸರಿಂದ ಯೋಗ ತರಬೇತಿ
ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಲವು ಆಸನಗಳನ್ನ ಕೆ.ಎಸ್ ಆರ್ಪಿ ಯ 265 ಸಿಬ್ಬಂದಿಗೆ ಯೋಗ ತರಬೇತಿ ನಡೆಸಲಾಯ್ತು.
ಸಿಬ್ಬಂದಿ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕೊರೊನಾ ಅನ್ನೋ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಆರೋಗ್ಯ ಅಗತ್ಯವೆಂದು ಅಲೋಕ್ ಕುಮಾರ್ ಸಲಹೆ ನೀಡಿದರು.