ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವಿಧಾನಸೌಧದಿಂದ ನಂದಿ ಬೆಟ್ಟದವರೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಬೈಕ್ ರ‍್ಯಾಲಿಗೆ ಸಿಎಂ ಚಾಲನೆ - World Tourism Day news
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಪರಿಚಯ ಹಾಗೂ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಬೈಕ್ ರ‍್ಯಾಲಿಗೆ ಸಿಎಂ ಚಾಲನೆ
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಿಎಸ್ವೈ ಚಾಲನೆ ನೀಡಿದರು. ಐವರು ಸೊಲೊ ಮಹಿಳಾ ರೈಡರ್ಗಳು ಮೈಸೂರಿಗೆ ಬೈಕ್ ಮೂಲಕ ಸವಾರಿ ನಡೆಸಿದರು. ಉಳಿದಂತೆ 30 ಕ್ಕೂ ಹೆಚ್ಚು ಬೈಕ್ ಸವಾರರು ನಂದಿ ಬೆಟ್ಟಕ್ಕೆ ಸವಾರಿ ನಡೆಸಿದರು.
ರಾಜ್ಯದ ವಿವಿಧ ಪ್ರವಾಸಿ ತಾಣಗಳ ಪರಿಚಯ ಹಾಗೂ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಈ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
Last Updated : Sep 27, 2020, 6:14 PM IST