ಬೆಂಗಳೂರು : ಅಂತಾರಾಷ್ಟ್ರೀಯ ಪೊಲೀಸ್ & ಫೈರ್ ಗೇಮ್ಸ್ ನಲ್ಲಿ ಭಾರತದ ಪರ ಕರ್ನಾಟಕ ಕ್ಯಾಡರ್ ನ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್ಎಸ್ ರೆಡ್ಡಿ ಸತತ ನಾಲ್ಕನೇ ಬಾರಿ ಪದಕಗಳನ್ನು ಬೇಟೆಯಾಡಿದ್ದಾರೆ.
ನೆದರ್ಲೆಂಡ್ಸ್ ನ ರೋಟರ್ ಡ್ಯಾಂನಲ್ಲಿ ನಡೆದ ವರ್ಲ್ಡ್ ಪೊಲೀಸ್ & ಫೈರ್ ಗೇಮ್ಸ್ ನ ಅರವತ್ತು ವರ್ಷ ಮೇಲ್ಪಟ್ಟ ವಯೋಮಾನದವರ ಟೆನ್ನಿಸ್ ಡಬಲ್ಸ್ ನಲ್ಲಿ ಪಂಜಾಬ್‌ನ ಸುರಿಂದರ್ ಮೋಹನ್ ಶರ್ಮಾ ಜೊತೆಗೂಡಿ ಚಿನ್ನದ ಪದಕ ಗೆದ್ದರೆ, ಸಿಂಗಲ್ಸ್‌ನಲ್ಲಿ ಬೆಳ್ಳಿಯ ಪದಕ ಗೆಲ್ಲುವ ಮೂಲಕ ನಾಲ್ಕನೇ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಹೆಸರು ರಾರಾಜಿಸುವಂತೆ ಮಾಡಿದ್ದಾರೆ.