ಕರ್ನಾಟಕ

karnataka

ETV Bharat / state

ವಿಶ್ವ ಹೃದಯ ದಿನ: ಹೃದಯಾಘಾತದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ.. ಡಾ. ವಿವೇಕ್‌ ಜವಳಿ - world heart day slogan 2022

ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ವಯಸ್ಸಿನ ಮಿತಿ ಇಲ್ಲದೇ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಡಾ ವಿವೇಕ್​ ಜವಳಿ ಹೇಳಿದ್ದಾರೆ.

world-heart-day-awareness-should-be-created-about-heart-attacks
ವಿಶ್ವ ಹೃದಯ ದಿನ : ಹೃದಯಾಘಾತದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ... ಡಾ. ವಿವೇಕ್‌ ಜವಳಿ

By

Published : Sep 28, 2022, 9:13 PM IST

Updated : Sep 29, 2022, 10:29 AM IST

ಬೆಂಗಳೂರು : ಇಂದು ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಫೊರ್ಟಿಸ್‌ ಆಸ್ಪತ್ರೆ ಹೃದಯತಜ್ಞ ಡಾ. ವಿವೇಕ್‌ ಜವಳಿ ಹೇಳಿದ್ದಾರೆ.

ಕನ್ನಿಂಗ್ಹ್ಯಾಮ್ ರಸ್ತೆಯ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಇಂಡಿಯನ್ ಅಸೋಸಿಯೇಷನ್ ​​ಆಫ್ ಕಾರ್ಡಿಯೋವಾಸ್ಕುಲರ್-ಥೋರಾಸಿಕ್ ಫೊರ್ಟಿಸ್‌ ಆಸ್ಪತ್ರೆ ಸಹಯೋಗದಲ್ಲಿ ಹೃದಯಾಘಾತದ ಕುರಿತು ಜಾಗೃತಿ ಹಾಗೂ ಔಟ್‌ರೀಚ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ, ಮಾತನಾಡಿದ ಡಾ. ವಿವೇಕ್‌ ಜವಳಿ, ಅನಾರೋಗ್ಯಕರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ವಯಸ್ಸಿನ ಮಿತಿ ಇಲ್ಲದೇ ಹೃದಯಾಘಾತ ಹೆಚ್ಚಳವಾಗುತ್ತಿದೆ. ಅದರಲ್ಲೂ ಯುವಕರು ಇದಕ್ಕೆ ಬಲಿಯಾಗುತ್ತಿರುವುದು ಶೋಚನೀಯ. ಹೀಗಾಗಿ ಹೃದಯಾಘಾತ, ಹೃದಯಸ್ಥಂಭನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಕಾಣುತ್ತಿದೆ ಎಂದು ಹೇಳಿದರು.

ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಬೇಕಿದೆ: ಕೆಲವರಿಗೇ ಈಗಲೂ ಹೃದಯಾಘಾತದ ಲಕ್ಷಣಗಳು ತಿಳಿದಿಲ್ಲ. ಎದೆ ನೋವು ಗ್ಯಾಸ್ಟ್ರಿಕ್​ ನೋವು ಎಂದು ನಿರ್ಲಕ್ಷಿಸಿ ಬಿಡುತ್ತಾರೆ. ಹೃದಯಾಘಾತವಾದ ಸಂದರ್ಭದಲ್ಲಿ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳುವುದರಿಂದ ಹೃದಯ ಮಸಲ್ಸ್‌ ಸಾಯುವುದನ್ನು ನಿಯಂತ್ರಿಸಬಹುದು. ಹೀಗಾಗಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಹಿಂದೆಲ್ಲ ವಿದೇಶಗಳಲ್ಲಿ ಹೃದಯಾಘಾತ ಹೆಚ್ಚಾಗಿತ್ತು. ಆದರಿಂದ ಅವರು ಈ ಬಗ್ಗೆ ಜಾಗೃತರಾಗಿದ್ದೂ, ಈ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಆದರೆ, ಭಾರತದಲ್ಲಿ ಕಳೆದ 10 ವರ್ಷದಲ್ಲಿ ಈ ಹೃದಯಾಘಾತ ಹೆಚ್ಚಳವಾಗಿದೆ. ಆಹಾರ ಕ್ರಮದ ಬಗ್ಗೆ ಈಗಲೂ ಜಾಗೃತಿ ವಹಿಸದೇ ಹೋದಲ್ಲಿ ಮುಂದಿನ ದಿನಗಳು ಇನ್ನಷ್ಟು ಭಯಾನಕವಾಗಿರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೃತ್ತಿಪರ ವೈದ್ಯರ ನೆರವಿನೊಂದಿಗೆ ಹೃದಯಾಘಾತದ ಶಿಕ್ಷಣ: ಐಎಸಿಟಿಎಸ್ ಕಾರ್ಯದರ್ಶಿ ಡಾ. ಹಿರೇಮಠ ಮಾತನಾಡಿ, ನಮ್ಮ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರೆ ಹೃದಯಾಘಾತದ ಬಗ್ಗೆ ಅರಿವು ಮೂಡಿಸುವುದು. ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಈ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ವೃತ್ತಿಪರ ವೈದ್ಯರ ನೆರವಿನೊಂದಿಗೆ ಶಿಕ್ಷಣ ಕೊಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ :ಸೆ.29 ವಿಶ್ವ ಹೃದಯ ದಿನ: ಕಾರ್ಡಿಯಾಕ್ ಅರೆಸ್ಟ್ ಅಪಾಯ.. ಇರಲಿ ಎಚ್ಚರ

Last Updated : Sep 29, 2022, 10:29 AM IST

ABOUT THE AUTHOR

...view details