ಬೆಂಗಳೂರು:ವಿಶ್ವ ತಲೆ ಗಾಯ ಜಾಗೃತಿ ದಿನದ ಅಂಗವಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ವಿಶೇಷ ಅಭಿಯಾನ ನಡೆಸಿದೆ.
ವಿಶ್ವ ತಲೆ ಗಾಯ ಜಾಗೃತಿ ದಿನ: ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ
ವಿಶ್ವ ತಲೆ ಗಾಯ ಜಾಗೃತಿ ದಿನದ ಅಂಗವಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ವಿಶೇಷ ಅಭಿಯಾನ ನಡೆಸಿದರು. ಹೆಲ್ಮೆಟ್ ಧರಿಸದೆ ವಾಹನವನ್ನು ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.
ಬಹುತೇಕ ಅಪಘಾತಗಳಲ್ಲಿ ಅನೇಕ ಬಾರಿ ಅನಾಹುತಕ್ಕೆ ಕಾರಣವಾಗುವುದು ತಲೆಯ ಗಾಯ. ಇದನ್ನು ತಡೆಯಲು ಈಗಾಗಲೇ ಪೊಲೀಸರು ಬೈಕ್ ಸವಾರ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆ. ಆದರೆ ಬಹುತೇಕ ಸವಾರರು ನಾನಾ ಕಾರಣಕ್ಕೆ ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯ ತೋರಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೈಕ್ ಚಾಲನೆ ಮಾಡುತ್ತಾರೆ ಎಂದು ತಿಳಿಸುವ ಮೂಲಕ ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿ ಜಾಗೃತಿ ಮೂಡಿಸಿದರು.
ಇನ್ನು ಹೆಲ್ಮೆಟ್ ಧರಿಸದೆ ವಾಹನವನ್ನು ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ, ಹೆಲ್ಮೆಟ್ ಬಳಕೆಯ ಬಗ್ಗೆ ತಿಳಿ ಹೇಳಿದರು. ಸತತ ಮೂರು ವರ್ಷಗಳಿಂದ ಈ ಜಾಗೃತಿ ಮಾಡುತ್ತಾ ಬಂದಿರುವ ಫೋರ್ಟಿಸ್ ಆಸ್ಪತ್ರೆ ಇಂದು ನಗರದ ಕನ್ನಿಂಗ್ಯಾಮ್ ರಸ್ತೆಯಲ್ಲಿ ಸುಮಾರು 150 ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿ ತೋರಿದರು. ಇವರಿಗೆ ಕಾಲೇಜು ವಿದ್ಯಾರ್ಥಿಗಳು ಸಹ ಸಾಥ್ ನೀಡಿದರು.