ಕರ್ನಾಟಕ

karnataka

ETV Bharat / state

ಇಂದಿನಿಂದ 13ನೇ ಆವೃತ್ತಿಯ ಏರ್​ ಶೋ...  ಲೋಹದ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ - ರಕ್ಷಣಾ ಸಚಿವಾ ರಾಜನಾಥ್​ ಸಿಂಗ್​​

ಪ್ರತ್ಯಕ್ಷ ಹಾಗೂ ವರ್ಚುಯಲ್ ಎರಡೂ ಮಾದರಿಯಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ ಶೋ ನಡೆಯಲಿದ್ದು, ಭಾರತ ಸೇರಿದಂತೆ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿದೆ.

13ನೇ ಆವೃತ್ತಿಯ ಏರ್​ಶೋ
13ನೇ ಆವೃತ್ತಿಯ ಏರ್​ಶೋ

By

Published : Feb 3, 2021, 2:29 AM IST

Updated : Feb 3, 2021, 6:16 AM IST

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್​ ಶೋ ಇಂದಿನಿಂದ ಆರಂಭವಾಗಲಿದೆ. 5 ದಿನಗಳ ಪ್ರದರ್ಶನಕ್ಕಾಗಿ ನಿನ್ನೆಯಿಂದಲೇ ಲೋಹದ ಹಕ್ಕಿಗಳ ತಾಲೀಮು ಆರಂಭವಾಗಿದೆ.

ಫೆಬ್ರವರಿ 3ರಿಂದ 7ರವರೆಗೆ ಐದು ದಿನಗಳ ಕಾಲ ಏರ್ ಶೋ ನಡೆಯಲಿದ್ದು,ಇದು ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನವಾಗಲಿದೆ. ಇದೇ ಮೊದಲ ಬಾರಿಗೆ ಸೂರ್ಯ ಕಿರಣ್ ಹಾಗೂ ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಲಿವೆ. ಇವುಗಳ ಜೊತೆಗೆ 'ಚಿನೂಕ್ ಟ್ವಿನ್ ಎಂಜಿನ್' ಹೆಲಿಕಾಪ್ಟರ್ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ವಿಶೇಷ.

ಪ್ರತ್ಯಕ್ಷ ಹಾಗೂ ವರ್ಚುಯಲ್ ಎರಡೂ ಮಾದರಿಯಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ ಶೋ ನಡೆಯಲಿದ್ದು, ಭಾರತ ಸೇರಿದಂತೆ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿದೆ. 42 ವಿಮಾನಗಳು ದಿನದಲ್ಲಿ 7 ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ಡಕೋಟಾ, ಸುಖೋಯ್, ರಫೆಲ್, ಎಲ್ ಸಿ ಹೆಚ್, ಎಲ್ ಯು ಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.

ಬಿಗಿ ಪೊಲೀಸ್​ ಬಂದೋಬಸ್ತ್​

ಇನ್ನು ಈ ಏರ್​ ಶೋಗೆ ದೇಶ-ವಿದೇಶಗಳಿಂದ‌ ಗಣ್ಯರು ರಾಜಧಾನಿಗೆ ದೌಡಾಯಿಸಿದ್ದಾರೆ. ಪ್ರತಿಷ್ಠಿತ ತಾರಾ ಹೋಟೆಲ್​​ಗಳಲ್ಲಿ ವಾಸ್ತವ್ಯ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ‌‌.

ವೈಮಾನಿಕ ಪ್ರದರ್ಶನಕ್ಕೆ‌ 3 ಸುತ್ತಿನ ಪೊಲೀಸ್ ಸರ್ಪಗಾವಲು ಹಾಕಲಾಗಿದೆ‌‌. 4 ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ‌. 18 ಡಿಸಿಪಿಗಳು, ಬಹುತೇಕ ಎಲ್ಲಾ ವಲಯದ ಎಸಿಪಿಗಳು, ಪೊಲೀಸ್ ಇನ್ಸ್​​ಪೆಕ್ಟರ್​​, ಪಿಎಸ್​​ಐ ಸೇರಿದಂತೆ‌ ಒಟ್ಟು 5,000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ‌‌. ಹೆಚ್ಚುವರಿಯಾಗಿ 52 ಕೆಎಸ್​​ಆರ್​​ಪಿ, 26 ಸಿಎಆರ್ ತುಕಡಿಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ.

ಯಲಹಂಕ ವಾಯುನೆಲೆಯ ಪ್ರವೇಶ ದ್ವಾರದ ಮುಂದೆ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ‌. ಏರ್ ಶೋನಲ್ಲಿ ಭಾಗಿಯಾಗುವ ಅತಿ ಗಣ್ಯ ಹಾಗೂ ಗಣ್ಯರು ಈಗಾಗಲೇ ನಗರಕ್ಕೆ ಬಂದಿದ್ದು, ವಾಸ್ತವ್ಯ ಹೂಡಿರುವ ಸ್ಟಾರ್ ಹೋಟೆಲ್​​ಗಳ ಮುಂದೆ ಪೊಲೀಸ್ ಚೌಕಿ ತೆರೆಯಲಾಗಿದೆ‌ ಎಂದು‌ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ‌.

ಏರ್ ಶೋಗಾಗಿ ಹೆಚ್ಚುವರಿ ಬಸ್​

ಏರೋ ಇಂಡಿಯಾ ವೀಕ್ಷಣೆ ಮಾಡಲು ಹೋಗಲು ತೊಂದರೆಯಾಗದಂತೆ ಬಿಎಂಟಿಸಿಯಿಂದ ಹೆಚ್ಚುವರಿಯಾಗಿ ಬಸ್​ಗಳ ವ್ಯವಸ್ಥೆ ಮಾಡಿದೆ. ಪ್ರಯಾಣಿಕರ ಬೇಡಿಕೆ ಹಾಗೂ ದಟ್ಟಣೆಗೆ ಅನುಗುಣವಅಗಿ ಬಸ್​ಗಳ ಸೇವೆಯನ್ನು ಒದಗಿಸಿಲಿದೆ. ಮೆಜೆಸ್ಟಿಕ್​ ಮತ್ತು ಯಲಹಂಕ ಮಧ್ಯೆ ಬಸ್​ಗಳು ಸಂಚಾರ ಮಾಡಲಿದೆ.

Last Updated : Feb 3, 2021, 6:16 AM IST

ABOUT THE AUTHOR

...view details