ಕೆ.ಆರ್.ಪುರ (ಬೆಂಗಳೂರು): ಕೆ.ಆರ್.ಪುರದ ಹೊರಮಾವು ವಾರ್ಡ್ನ ಅರ್ಕಾವತಿ ಬಡಾವಣೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು 3 ಸಾವಿರ ಗಿಡ ನೆಡಲು ಚಾಲನೆ ನೀಡಿದರು. ನೂರಕ್ಕೂ ಹೆಚ್ಚು ಮಹಿಳೆಯರಿಗೆ ತುಳಸಿ ಗಿಡವನ್ನು ನೀಡಿ ವಿಶ್ವ ಪರಿಸರ ದಿನದ ಶುಭಾಶಯ ತಿಳಿಸಿದರು.
3 ಸಾವಿರ ಗಿಡ ನೆಡಲು ಚಾಲನೆ ನೀಡಿದ ಸಚಿವ ಬೈರತಿ ಬಸವರಾಜ್ - ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್
ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಪರಿಸರ ಹಾಳು ಮಾಡುವ ಕೆಲಸ ಯಾರೂ ಮಾಡಬಾರದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಗಿಡ ನೆಡಲು ಚಾಲನೆ ನೀಡಿದ ಸಚಿವ ಬೈರತಿ ಬಸವರಾಜ್
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಪರಿಸರ ಹಾಳು ಮಾಡುವ ಕೆಲಸ ಯಾರೂ ಮಾಡಬಾರದು. ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.
ಗಿಡ ನೆಡುವ ಕೆಲಸ ಮಾಡಬೇಕು ಎಂದು ನನ್ನ ಇಲಾಖೆಯಿಂದ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆಯ ಎಲ್ಲ ಅಧಿಕಾರಿಗಳಿಗೂ ಹೇಳಿದ್ದೇನೆ. ಹವಾಮಾನ ಇಲಾಖೆಯವರು ಹೇಳಿದಂತೆ ಪರಿಸರ ತುಂಬಾನೆ ಹದಗೆಟ್ಟಿದೆ. ಅದನ್ನ ಉಳಿಸಲು ನಾವು ಕೈ ಜೋಡಿಸಬೇಕು ಎಂದರು.