ಕರ್ನಾಟಕ

karnataka

ETV Bharat / state

ಹೈಕೋರ್ಟ್​​​​ನಲ್ಲಿ ವಿಭಿನ್ನ ವಿಶ್ವಪರಿಸರ ದಿನ: ಹರ್ಬಲ್ ಗಾರ್ಡನ್ ಉದ್ಘಾಟನೆ - ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನದ ನಿಮಿತ್ತ ಹೈಕೋರ್ಟ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಹರ್ಬಲ್ ಆ್ಯಂಡ್ ಮೆಡಿಸಿನಲ್ ಗಾರ್ಡನ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಉದ್ವಾಟಿಸಿದರು.

World environment day
World environment day

By

Published : Jun 5, 2020, 6:11 PM IST

ಬೆಂಗಳೂರು: ರಾಜ್ಯ ಹೈಕೋರ್ಟ್ ಆವರಣದಲ್ಲಿಂದು ವಿಶ್ವ ಪರಿಸರ ದಿನವನ್ನು ವಿವಿಧ ರೀತಿಯ ಔಷಧೀಯ ಗಿಡಗಳನ್ನು ನೆಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.

ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಗಿಡ ನೆಡುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ಬಳಿಕ ವಿಶ್ವ ಪರಿಸರ ದಿನದ ನಿಮಿತ್ತ ಹೈಕೋರ್ಟ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಹರ್ಬಲ್ ಆ್ಯಂಡ್ ಮೆಡಿಸಿನಲ್ ಗಾರ್ಡನ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಉದ್ಘಾಟಸಿದರು.

ಈ ವೇಳೆ, ಮಾತನಾಡಿದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಸಂವಿಧಾನದ ಅನುಚ್ಛೇದ 48ಎ ಮತ್ತು 51ಎ ಅನುಸಾರ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಬೇಕು. ವಿಶ್ವ ಪರಿಸರ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವ ಸಲುವಾಗಿ ಹೈಕೋರ್ಟ್ ಆವರಣದಲ್ಲಿ ಗಿಡಮೂಲಿಕೆ ಮತ್ತು ಔಷಧೀಯ ಗಿಡಗಳ ಗಾರ್ಡನ್ ನಿರ್ಮಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ಅಲೋಕ್ ಆರಾಧೆ, ಬಿ.ವೀರಪ್ಪ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಸೇರಿದಂತೆ ಹೈಕೋರ್ಟ್ ನ ಹಲವು ಸಿಬ್ಬಂದಿ ಭಾಗವಹಿಸಿದ್ದರು.

ABOUT THE AUTHOR

...view details