ಬೆಂಗಳೂರು:ಮಕ್ಕಳು ಹಾಗೂ ಯುವ ಜನರಲ್ಲಿ ಕಳೆದ ಹತ್ತು ವರ್ಷದಲ್ಲಿ ಬ್ರೈನ್ ಟ್ಯೂಮರ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದ್ವಿಗುಣವಾಗಿರುವುದು ಬಹಳ ಆತಂಕಕ್ಕೆ ದೂಡಿದೆ. ಹೀಗಾಗಿ ಬ್ರೈನ್ ಟ್ಯೂಮರ್ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಶೀಘ್ರ ಚಿಕಿತ್ಸೆ ಕೊಡಿಸುವುದು ವಿಶ್ವ ಬ್ರೈನ್ ಟ್ಯೂಮರ್ ದಿನದ ಸಂದೇಶ ಎಂದು ಚೀಫ್ ನ್ಯೂರೋ ಸರ್ಜನ್ ಡಾ. ಎನ್.ಕೆ.ವೆಂಕಟರಮಣ ಹೇಳಿದರು.
ವಿಶ್ವ ಬ್ರೈನ್ ಟ್ಯೂಮರ್ ದಿನ... ಅತಿಯಾದ ಮೊಬೈಲ್ ಬಳಕೆಯಿಂದ ದೂರ ಇರಲು ವೈದ್ಯರ ಸಲಹೆ!
ಮೊಬೈಲ್ ಗೇಮ್ಗಳ ಅತಿಯಾದ ಬಳಕೆ, ರಾತ್ರಿ ಮಲಗುವ ಸಮಯದಲ್ಲಿ ಮೊಬೈಲ್ಅನ್ನು ತಲೆಯ ಹತ್ತಿರದಲ್ಲಿ ಇಟ್ಟು ಮಲಗುವುದು ಮಾಡಬಾರದು. ಅಲ್ಲದೆ ಮಳೆ ಗುಡುಗು ಬರುವ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಬ್ರೈನ್ ಟ್ಯೂಮರ್ ಹೆಚ್ಚುತ್ತಿರಲು ಅತಿಯಾದ ಮೊಬೈಲ್ ಬಳಕೆ ಕಾರಣ. ಬ್ರೈನ್ ಟ್ಯೂಮರ್ಗೆ ಇಂತದ್ದೇ ನಿರ್ದಿಷ್ಟ ಕಾರಣ ಎಂದು ಪತ್ತೆ ಹಚ್ಚಿಲ್ಲವಾದರೂ ಇತ್ತಿಚೇಗೆ ಸಣ್ಣ ಮಕ್ಕಳು ಹಾಗೂ ಯುವ ಜನರಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಅತಿಯಾಗಿ ಮೆದುಳಿನ ಮೇಲೆ ಪ್ರಭಾವ ಬೀರುತ್ತಿದೆ. ರೇಡಿಯೇಷನ್ನಿಂದಾಗಿ ಬ್ರೈನ್ ಟ್ಯೂಮರ್ ಸೆಲ್ಗಳು ಆಕ್ಟಿವ್ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಮೊಬೈಲ್ ಗೇಮ್ಗಳ ಅತಿಯಾದ ಬಳಕೆ, ರಾತ್ರಿ ಮಲಗುವ ಸಮಯದಲ್ಲಿ ಮೊಬೈಲ್ ತಲೆಯ ಹತ್ತಿರದಲ್ಲಿ ಇಟ್ಟು ಮಲಗುವುದು ಮಾಡಬಾರದು. ಮಳೆ ಗುಡುಗು ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.