ಬೆಂಗಳೂರು:ಪೊಲೀಸರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಹೆಚ್ಚಾಗುತ್ತಿದ್ದು ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳ ಮೊರೆ ಹೋಗಿದ್ದಾರೆ.
50 ವರ್ಷ ಮೇಲ್ಪಟ್ಟವರಿಗೆ ವರ್ಕ್ ಫ್ರಮ್ ಹೋಂ ಆದೇಶ ನೀಡಿದ ನಗರ ಪೊಲೀಸ್ ಆಯುಕ್ತ - ಪೊಲೀಸ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ಆದೇಶ
ರಾಜ್ಯದಲ್ಲಿ ಪೊಲೀಸರಿಗೂ ಕೊರೊನಾ ಕಂಟಕ ಎದುರಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 50 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ಮಾಡುವಂತೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ 55 ವರ್ಷ ಮೇಲ್ಪಟ್ಟವರು ರಜಾ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇದೀಗ 50 ವರ್ಷಕ್ಕಿಂತ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ಮನೆಯಲ್ಲೆ ಕೆಲಸ ಮಾಡುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ಹಿಂದೆ ಇದೇ ವಯೋಮಾನದ ಪೊಲೀಸ್ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಕಾನೂನು ಸುವ್ಯವಸ್ಥೆ, ಸಿಸಿಬಿ, ಸಂಚಾರಿ ಪೊಲೀಸರು, ಸಿಎಆರ್ ಮತ್ತು ವಿಶೇಷ ಘಟಕಗಳಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಇದೀಗ 50 ವರ್ಷ ಆದವರಿಗೂ ಕೂಡ ಮನೆಯಲ್ಲೆ ಕಾರ್ಯನಿರ್ವಹಣೆ ಮಾಡುವ ನಿಯಮ ಅನ್ವಯವಾಗಲಿದೆ.
ಕೋವಿಡ್ ಹೆಚ್ಚಾಗಿ 50 ವರ್ಷ ದಾಟಿದವರನ್ನು ಬಲಿ ಪಡೆಯುತ್ತಿದ್ದು, ಹೀಗಾಗಿ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ.