ಬೆಂಗಳೂರು :ರಾಷ್ಟ್ರದ ರೈತ ನಾಯಕ ರಾಜೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣದಲ್ಲಿ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆ ಉಮಾದೇವಿಯನ್ನು ಹೈಗ್ರೌಂಡ್ ಪೊಲೀಸರು ಇಂದು ಬಂಧಿಸಿದ್ದಾರೆ. ಈ ಹಿಂದೆ ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಮತ್ತು ಶಿವಕುಮಾರ್ನ ವಿಚಾರಣೆಗೆ ಒಳಪಡಿಸಿದ್ದರು.
ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣದಲ್ಲಿ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆ ಉಮಾ ಬಂಧನ! - ರಾಕೇಶ್ ಟೀಕಾಯತ್ ಮೇಲೆ ಮಸಿ ಎರಚಿದ್ದ ಆರೋಪದಡಿ ಉಮಾ ಬಂಧನ
ರೈತ ಮುಖಂಡ ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಸಂಘಟನೆ ಅಧ್ಯಕ್ಷೆ ಉಮಾರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ..
![ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣದಲ್ಲಿ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆ ಉಮಾ ಬಂಧನ! Women organisation chairperson Uma arrested, Uma arrested over ink throw on rakesh tikait case, rakesh tikait case update, ಮಹಿಳಾ ಸಂಘಟನೆ ಅಧ್ಯಕ್ಷೆ ಉಮಾ ಬಂಧನ, ರಾಕೇಶ್ ಟೀಕಾಯತ್ ಮೇಲೆ ಮಸಿ ಎರಚಿದ್ದ ಆರೋಪದಡಿ ಉಮಾ ಬಂಧನ, ರಾಕೇಶ್ ಟೀಕಾಯತ್ ಕೇಸ್ ಅಪ್ಡೇಟ್,](https://etvbharatimages.akamaized.net/etvbharat/prod-images/768-512-15485445-917-15485445-1654501161680.jpg)
ಮಹಿಳಾ ಸಂಘಟನೆ ಅಧ್ಯಕ್ಷೆ ಉಮಾ ಬಂಧನ
ಓದಿ:ಮೋದಿ ಡೌನ್ ಡೌನ್ ಎಂದ ಬಾಡಿಗೆ ಮಹಿಳಾ ಕಾರ್ಯಕರ್ತೆ ಎಡವಟ್ಟು.. ಭರತ್ ಶೆಟ್ಟಿ ನಗೆಪಾಟಲಿಗೀಡು..
ತನಿಖೆ ವೇಳೆ ಉಮಾದೇವಿ ಕೈವಾಡ ಕಂಡು ಬಂದಿದೆ. ಹಾಗಾಗಿ, ಪೊಲೀಸರು ಉಮಾದೇವಿಯನ್ನ ಬಂಧಿಸಿದ್ದಾರೆ. ಘಟನೆ ದಿನ ಉಮಾದೇವಿ ಮುಂದೆ ನಿಂತು ಕೃತ್ಯ ನಡೆಸಿದ್ದರು. ಅಲ್ಲದೆ ಉಮಾದೇವಿ ಮನೆ ಮೇಲೆ ಇಂದು ದಾಳಿ ನಡೆಸಿದಾಗ ಮಾರಾಕಾಸ್ತ್ರಗಳು ಕೂಡ ಪತ್ತೆಯಾಗಿವೆ. ಸದ್ಯ ಉಮಾದೇವಿಯನ್ನ ಪೊಲೀಸ್ ಕಸ್ಟಡಿಗೆ ಪಡೆದು ಘಟನೆಗೆ ಯಾರು ಕುಮ್ಮಕ್ಕು ನೀಡಿದ್ರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
Last Updated : Jun 6, 2022, 1:56 PM IST