ಬೆಂಗಳೂರು :ಪ್ರತಿದಿನ ಟ್ರಾಫಿಕ್ ಸಮಸ್ಯೆ ನಿವಾರಿಸುವಲ್ಲಿ ಬ್ಯುಸಿಯಾಗಿದ್ದ ಪೊಲೀಸರು ಇಂದು ಕೊಂಚ ರಿಲ್ಯಾಕ್ಸ್ ಮೂಡ್ನಲ್ಲಿದ್ದರು. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದಲೇ ಆಚರಿಸಿದರು.
ಮಹಿಳಾ ದಿನಾಚರಣೆ: ವಾಕ್‌ಥಾನ್, ಜುಂಬಾ ಡ್ಯಾನ್ಸ್ ಮಾಡಿದ ಕೆಆರ್ಪುರಂ ಪೊಲೀಸ್ ಸಿಬ್ಬಂದಿ.. - ಕೆಆರ್ಪುರಂ ಪೊಲೀಸ್ ಸಿಬ್ಬಂದಿ
ಮಹಿಳಾ ದಿನಾಚರಣೆ ಅಂಗವಾಗಿ ನಗರದ ಕೆಆರ್‌ಪುರಂನ ಐಟಿಐ ಮೈದಾನದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆಯಂತೆ ಕೆಆರ್ಪುರಂ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಠಾಣೆ ಜಂಟಿಯಾಗಿ ಬಿಬಿಎಂಪಿಯಿಂದ ಐಟಿಐವರೆಗೆ ವಾಕ್‌ಥಾನ್ ಏರ್ಪಡಿಸಿತ್ತು. ಈ ಕಾರ್ಯಕ್ರದಲ್ಲಿ ಮಹಿಳೆಯರು, ವೃದ್ಧರು, ಪೌರ ಕಾರ್ಮಿಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಬಳಿಕ ಫಿಟ್ನೆಸ್ ಸಂಸ್ಥೆ ವತಿಯಿಂದ ಜುಂಬಾ ಡ್ಯಾನ್ಸ್ ಆಯೋಜಿಸಲಾಗಿತ್ತು. ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ದೇವಿ ಸೇರಿ ಎಲ್ಲಾ ಮಹಿಳಾ ಪೊಲೀಸ್ ಸಿಬ್ಬಂದಿ, ಹಲವು ಸಂಘ ಸಂಸ್ಥೆಗಳ ಸಿಬ್ಬಂದಿ, ಕೆಆರ್ಪುರಂ ಇನ್ಸ್ಪೆಕ್ಟರ್ ಅಂಬರೀಶ್ ಹಾಗೂ ಸಿಬ್ಬಂದಿ ವರ್ಗ ಹೆಜ್ಜೆ ಹಾಕಿತು.