ಕರ್ನಾಟಕ

karnataka

ETV Bharat / state

ತಾರತಮ್ಯ, ದೌರ್ಜನ್ಯ ತಡೆಗಟ್ಟಲು ಅರಿವು ಮೂಡಿಸಬೇಕು: ಸಚಿವ ಡಾ.ಕೆ.ಸುಧಾಕರ್ - ಪಿಂಕ್​ ಭೂತ್ ಉದ್ಘಾಟನೆ ಸುದ್ದಿ,

ಮಹಿಳೆಯರ ಮೇಲೆ ತಾರತಮ್ಯ ಮತ್ತು ದೌರ್ಜನ್ಯ ತಡೆಗಟ್ಟಲು ಅರಿವು ಮೂಡಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Pink bhoot open, Pink bhoot open by Minister Sudhakar, Pink bhoot open for covide test in Bangalore, Pink bhoot news, ಪಿಂಕ್​ ಭೂತ್ ಉದ್ಘಾಟನೆ, ಪಿಂಕ್​ ಭೂತ್ ಉದ್ಘಾಟಿಸಿದ ಸಚಿವ ಸುಧಾಕರ್​, ಕೋವಿಡ್​ ಪರೀಕ್ಷೆಗಾಗಿ ಪಿಂಕ್​ ಭೂತ್ ಉದ್ಘಾಟನೆ, ಪಿಂಕ್​ ಭೂತ್ ಉದ್ಘಾಟನೆ ಸುದ್ದಿ, ಬೆಂಗಳೂರಿನಲ್ಲಿ ಪಿಂಕ್​ ಭೂತ್ ಉದ್ಘಾಟನೆ,
ಪಿಂಕ್​ ಬೂತ್​ ಉದ್ಘಾಟನೆ

By

Published : Mar 9, 2021, 10:05 AM IST

ಬೆಂಗಳೂರು : ನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಕೋವಿಡ್ ಲಸಿಕೆಯ ಪಿಂಕ್ ಬೂತ್ ಆರಂಭಿಸಲಾಗಿದೆ.

ಪಿಂಕ್​ ಬೂತ್​ ಉದ್ಘಾಟನೆ

ಕೋವಿಡ್ ಲಸಿಕೆಯನ್ನು ಪಿಎಚ್​ಸಿಗಳಲ್ಲಿ ನೀಡಲು ಆರಂಭಿಸಲಾಗಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಇನ್ನು ನಿತ್ಯ ಒಂದು ಲಕ್ಷ ಲಸಿಕೆ ನೀಡುವ ಗುರಿಯನ್ನ ಕೂಡ ಪಿಂಕ್ ಬೂತ್ ಹೊಂದಿದೆ.

ಪಿಂಕ್​ ಬೂತ್​ ಉದ್ಘಾಟನೆ

ಉದ್ಘಾಟನೆ ನಂತರ ಮಾತನಾಡಿದ‌ ಸಚಿವ, ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಳಲ್ಲೂ ಮಹಿಳೆಯರ ಕೊಡುಗೆ ದೊಡ್ಡದಿತ್ತು. ಮಹಿಳಾ ತಾರತಮ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗಿಲ್ಲ. ಅತ್ಯಾಚಾರ, ದೌರ್ಜನ್ಯ ಈಗಲೂ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಮಹಿಳಾ ಸಮಾನತೆ, ಹಕ್ಕುಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಪಿಂಕ್​ ಬೂತ್​ ಉದ್ಘಾಟನೆ

ತಮ್ಮನ್ನು ಬೆಂಬಲಿಸುವ ಕಾನೂನುಗಳ ಬಗ್ಗೆ ತಿಳಿಯಬೇಕು. ಮಹಿಳೆಯರ ಮಾಪನ ಮಾಡಿದರೆ ಮಾತ್ರ ಇಡೀ ಸಮಾಜದ ಮಾಪನ ಮಾಡಲು ಸಾಧ್ಯ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಪ್ರತಿಯೊಬ್ಬರ ಬಾಳಿನಲ್ಲಿ ತಾಯಿ, ಮಡದಿ, ಸಹೋದರಿಯಾಗಿ ಮಹಿಳೆ ವಿಶೇಷ ಪಾತ್ರ ವಹಿಸುತ್ತಾಳೆ. ನವಜಾತ ಶಿಶು ಹಾಗೂ ತಾಯಂದಿರ ಮರಣ ಪ್ರಮಾಣವನ್ನೂ ಶೂನ್ಯಕ್ಕೆ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ನಿಟ್ಟಿನಲ್ಲಿ ಹೆಚ್ಚು ಕ್ರಮ ವಹಿಸಬೇಕಿದೆ. ಇದಕ್ಕಾಗಿ ಮಾತೃ ವಂದನಾ, ಸುರಕ್ಷಾ ಮೊದಲಾದ ಯೋಜನೆಗಳಿವೆ. ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಅವರ ಪಾತ್ರ ಹೆಚ್ಚಿದೆ ಎಂದರು.

ಪಿಂಕ್​ ಬೂತ್​ ಉದ್ಘಾಟನೆ

ABOUT THE AUTHOR

...view details