ಬೆಂಗಳೂರು :ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು ನಿನ್ನೆ ಕಾರ್ಪೊರೇಟ್ ಕಚೇರಿಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸೇಥ್, ಇನ್ನು ಈ ಸಂದರ್ಭಲ್ಲಿ ಮುಖ್ಯ ಅತಿಥಿಯಾಗಿ M/s ಯುನಿಕ್ ಕನ್ಸಲ್ಟೆಂಟ್‌ನ ಹಿರಿಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪದ್ಮ ಹೇಮಂತ್ ಭಾಗವಹಿಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಆಜಯ್ ಸೇಥ್ ಮಹಿಳಾ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ನಿರಂತರವಾಗಿರಬೇಕು. ಮಹಿಳೆಯರು ನಿಗಮದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಇನ್ನು ಅಥಿತಿ ಪದ್ಮ ಹೇಮಂತ್ ಕಿತ್ತೂರು ರಾಣಿ ಚೆನ್ನಮ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದ್ದಿದ್ದು, ಅಪಾರ ಅನುಭವವನ್ನು ಹೊಂದಿದ್ದಾರೆ. ವಿವಿಧ ಕಾಲೇಜು, ಸಂಸ್ಥೆಗಳಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದಾರೆ.
ಆಟದಲ್ಲಿ ತೊಡಗಿದ ಆಸ್ಪತ್ರೆಯ ಮಹಿಳಾ ಸಿಬ್ಬಂದಿ
ಮನೆಯಿಂದ ಹೊರಟು ಡ್ಯೂಟಿ ರಿಪೋರ್ಟ್ ಮಾಡಿಕೊಂಡರೆ ಮುಗಿತು, ರೋಗಿಗಳ ತಪಾಸಣೆ, ಔಷಧ ಕೊಡೋದು, ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮಾಡೋದು ಹೀಗೆ ಆಸ್ಪತ್ರೆಯಲ್ಲೇ ದಿನಕಳೆಯುವ ವೈದ್ಯಕೀಯ-ವೈದ್ಯಕೀಯೇತ್ತರ ಸಿಬ್ಬಂದಿ ನಿನ್ನೆ ತಮ್ಮ ಬಿಡುವಿನ ವೇಳೆ ವಿಶೇಷವಾಗಿ ಮಹಿಳಾ ದಿನವನ್ನ ಆಚರಿಸಿದರು. ಕೈಯಲ್ಲಿ ಸ್ಟೆತೋಸ್ಕೋಪ್ ಹಿಡಿಯುತ್ತಿದ್ದ ವೈದ್ಯರು, ಚೂಜಿ ಹಿಡಿಯುತ್ತಿದ್ದ ನರ್ಸ್ ಗಳು, ಸ್ವಚ್ಛ ಕಾರ್ಯದಲ್ಲಿ ಮಗ್ನರಾಗುತ್ತಿದ್ದ ಡಿ ಗ್ರೂಪ್ ನೌಕಕರು ಎಲ್ಲರೂ ಆಟ - ಹರಟೆಯಲ್ಲಿ ಮೈ ಮರೆತು ಹೋಗಿದ್ದರು.
ನಗರದ ಪ್ರತಿಷ್ಠಿತ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗಳಿಗಾಗಿ ರಂಗೋಲಿ ಸ್ಪರ್ಧೆ, ಮ್ಯುಸಿಕಲ್ ಚೇರ್, ಡಬ್ ಶರ್ಟ್ಸ್, ಅಂತ್ಯಾಕ್ಷರಿ ಸೇರಿದಂತೆ ಹಲವು ಸ್ಪರ್ಧೆಗಳನ್ನ ಏರ್ಪಡಿಸಲಾಗಿತ್ತು. ಬರೋಬ್ಬರಿ ಒಂದು ವರ್ಷದಿಂದ ಅಲ್ಲಿ- ಇಲ್ಲಿ ಎಲ್ಲೂ ಅಲ್ಲಾಡದೇ ಕೇವಲ ಕೋವಿಡ್ ಕೆಲಸದಲ್ಲೇ ಮುಳುಗಿದ್ದವರಿಗೆ ಮಹಿಳಾ ದಿನವೂ ವಿಶೇಷವಾಗಿತ್ತು. ಒತ್ತಡದಲ್ಲಿ ಇದ್ದವರು ತಮ್ಮ ಸಹೋದ್ಯೋಗಿಗಳೊಂದಿಗೆ ಖುಷಿಯಿಂದ ಆಟವನ್ನಆಡುತ್ತಾ ಒಬ್ಬರಿಗೆ ಒಬ್ಬರು ಕಾಲಳೆದುಕೊಳ್ಳುತ್ತಾ ಮಜಾ ಮಾಡಿದರು.