ಕರ್ನಾಟಕ

karnataka

ETV Bharat / state

ಸರ್ಕಾರಿ ಕಾರ್ಯಕ್ರಮದ ನಿರೂಪಕರು-ಗಾಯಕರನ್ನು ಬದಲಾಯಿಸಿ: ಸಿಎಂ ನಿವಾಸದೆದುರು ಮಹಿಳೆ ಧರಣಿ

ಸಿಎಂ ಆಗಿ ಅಧಿಕಾರಕ್ಕೇರಿದ ಬಸವರಾಜ ಬೊಮ್ಮಾಯಿ ನಿವಾಸದೆದುರು ಮಹಿಳೆಯೊಬ್ಬರು ಪ್ರತಿಭಟನೆ ಕೈಗೊಂಡಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿನ ನಿರೂಪಕರು ಹಾಗೂ ಗಾಯಕರನ್ನು ಬದಲಾಯಿಸುವಂತೆ ಒತ್ತಾಯಿಸಿ ಮಹಿಳೆ ಧರಣಿ ಕುಳಿತಿದ್ದರು.

women-protest-in-front-of-cm-residence-for-change-govt-program-anchors-singers
ಸಿಎಂ ಬೊಮ್ಮಾಯಿ ನಿವಾಸದೆದುರು ಮಹಿಳೆ ಧರಣಿ

By

Published : Aug 8, 2021, 11:32 AM IST

Updated : Aug 8, 2021, 1:12 PM IST

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳ ನಿರೂಪಕರು ಮತ್ತು ಗಾಯಕರ ಅವಕಾಶ ವಿಚಾರದಲ್ಲಿ ಸರ್ಕಾರ ಅನುಸರಿಸುತ್ತಿರುವ ಧೋರಣೆಯನ್ನು ಖಂಡಿಸಿ ಮಹಿಳೆಯೊಬ್ಬರು ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಧರಣಿ ನಡೆಸಿದ್ದು, ಹೊಸಬರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ಸಿಎಂ ನಿವಾಸದೆದುರು ಮಹಿಳೆ ಧರಣಿ

ಬೊಮ್ಮಾಯಿ ಅವರ ಆರ್.ಟಿ. ನಗರ ನಿವಾಸದ ಮುಂದೆ ಧರಣಿ ಕುಳಿತ ಮಹಿಳೆ, ಸರ್ಕಾರಿ ಕಾರ್ಯಕ್ರಮಗಳ ‌ನಿರೂಪಕರು ಹಾಗೂ ಗಾಯಕರ ಬದಲಾವಣೆಗೆ ಒತ್ತಾಯಿಸಿದರು. ಸರ್ಕಾರ ಹೊಸಬರಿಗೆ ಅವಕಾಶ ನೀಡಬೇಕು. ಆದರೆ ಕೇವಲ ಹಳೆ ನಿರೂಪಕರು ಹಾಗೂ ಗಾಯಕರಿಗೆ ಮಣೆ ಹಾಕುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಅದೇ ಗಾಯಕರು ನಿರೂಪಕರು ಇದ್ದಾರೆ. ಹೊಸಬರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದರು.

ಮಹಿಳೆ ಪ್ರತಿಭಟನೆಗೆ ಕುಳಿತಿದ್ದನ್ನು ಕಂಡ ಪೊಲೀಸರು ಧರಣಿ ನಿಲ್ಲಿಸುವಂತೆ ಮನವೊಲಿಸಿದರು. ಆದರೆ ಮಹಿಳೆ ಅಲ್ಲಿಂದ ಕದಲಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನ ಬಲವಂತವಾಗಿ ಅಲ್ಲಿಂದ ಕರೆದೊಯ್ಯಲಾಯಿತು.

ಓದಿ:ಕೇರಳ ಅಷ್ಟೇ ಅಲ್ಲ, ತಮಿಳುನಾಡಿನಿಂದ ಬರಲು ಬೇಕು ಕೊರೊನಾ ನೆಗೆಟಿವ್ ರಿಪೋರ್ಟ್​

Last Updated : Aug 8, 2021, 1:12 PM IST

ABOUT THE AUTHOR

...view details