ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸಾವು - ಉಪ್ಪಾರಪೇಟೆ ಸಂಚಾರಿ ಪೊಲೀಸರು

ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

women-died-of-road-accident-in-bengaluru
ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸಾವು

By

Published : Jun 4, 2023, 6:04 PM IST

Updated : Jun 4, 2023, 7:22 PM IST

ಬೆಂಗಳೂರು : ಕೆಎಸ್ಆರ್​​ಟಿಸಿ ಬಸ್ ಹರಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ಆನಂದರಾವ್ ಸರ್ಕಲ್ ಬಳಿ ಇಂದು ನಡೆದಿದೆ. ಮೃತ ಮಹಿಳೆಯನ್ನು ಹೆಬ್ಬಾಳದ ಕೆಂಪಾಪುರ‌ ನಿವಾಸಿ ಲತಾ(55) ಎಂದು ಗುರುತಿಸಲಾಗಿದೆ. ಲತಾ ಅವರು ತಮ್ಮ ಪತಿಯೊಂದಿಗೆ ಸ್ಕೂಟರ್​ನಲ್ಲಿ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗೆಜೆಟೆಡ್ ಆಫೀಸರ್ ಆಗಿರುವ ಲತಾ ಅವರು ಇಂದು ಭಾನುವಾರವಾದ ಹಿನ್ನೆಲೆ ಪತಿಯೊಂದಿಗೆ ಸ್ಕೂಟರ್ ನಲ್ಲಿ ಗಾಂಧಿನಗರಕ್ಕೆ ಶಾಪಿಂಗ್ ಗೆ ಬಂದಿದ್ದರು. ಶಾಪಿಂಗ್​ ಮುಗಿಸಿಕೊಂಡು ಆನಂದರಾವ್ ಸರ್ಕಲ್ ಬಳಿ ವಾಪಸಾಗುವಾಗ ಸ್ಕೂಟರ್ ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ.‌ ಈ ವೇಳೆ ಸ್ಕೂಟರ್​ನ ಹಿಂಬದಿಯಲ್ಲಿ ಕುಳಿತಿದ್ದ ಲತಾ ಬಸ್​ನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌. ಅಪಘಾತದಲ್ಲಿ ಲತಾ ಅವರ ಪತಿಗೆ ಸಣ್ಣಪುಟ್ಟ ಗಾಯವಾಗಿವೆ.

ಬೆಂಗಳೂರಲ್ಲಿ ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸಾವು

ಘಟನೆ ಬಗ್ಗೆ ತಿಳಿದು ಉಪ್ಪಾರಪೇಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ಸಂಬಂಧ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಸಂಭವಿಸಿತ್ತು ಭೀಕರ ಅಪಘಾತ.. ಇತ್ತೀಚೆಗೆ ಮೇ 29 ರಂದು ಮೈಸೂರು ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿ ಬಳ್ಳಾರಿ ಜಿಲ್ಲೆಯ 10 ಮಂದಿ ಸಾವನ್ನಪ್ಪಿದ್ದರು. ಕಾರಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಸಂಗನಕಲ್ಲು ಗ್ರಾಮದ 9 ಮಂದಿ ಹಾಗೂ ಕಾರಿನ ಚಾಲಕ ಸೇರಿದಂತೆ 10 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಟಿ.ನರಸೀಪುರ ಸಮೀಪದ ಕುರುಬೂರು ಗ್ರಾಮದ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಉಂಟಾದ ರಸ್ತೆ ಅಪಘಾತದಿಂದ ಈ ದುರಂತ ನಡೆದಿತ್ತು.

ಬಳಿಕ ಮೃತದೇಹಗಳನ್ನು ಕೆ ಆರ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಗನಕಲ್ಲು ಗ್ರಾಮಕ್ಕೆ ರವಾನಿಸಲಾಗಿತ್ತು. ಅಲ್ಲಿ ಸಾಮೋಹಿಕವಾಗಿ ಎಲ್ಲರ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ವೇಳೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಮುಟ್ಟಿತ್ತು. ಈ ದುರಂತದಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.

ಇದನ್ನೂ ಓದಿ :ರಾಯಚೂರು : ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಕಂಬದ ಮೇಲೆ ಲೈನ್‌ಮ್ಯಾನ್ ಸಾವು

Last Updated : Jun 4, 2023, 7:22 PM IST

ABOUT THE AUTHOR

...view details