ಕರ್ನಾಟಕ

karnataka

ETV Bharat / state

ಮಕ್ಕಳಿಗಾಗಿ ವಿಶೇಷ ಪೌಷ್ಟಿಕ ಆಹಾರದ ಕಿಟ್ ಸಿದ್ಧಪಡಿಸಿದ ಮಹಿಳಾ ಕಾಂಗ್ರೆಸ್​​ - ಕೋವಿಡ್ ಮೂರನೇ ಅಲೆ

ಕೋವಿಡ್ ಮೂರನೇ ಅಲೆ ಏನಾದರು ಬಂದರೆ ಅದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ರಾಜ್ಯ ಮಹಿಳಾ ಕಾಂಗ್ರೆಸ್​ನಿಂದ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗ್ತಿದೆ.

Women Congress Prepared Nutritional food kit for Kids
ಮಹಿಳಾ ಕಾಂಗ್ರೆಸ್​ನಿಂದ ಪೌಷ್ಠಿಕ ಆಹಾರದ ಕಿಟ್ ವಿತರಣೆ

By

Published : Jun 2, 2021, 1:00 PM IST

ಬೆಂಗಳೂರು: ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿರುವ ಕಾರಣ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲು ರಾಜ್ಯ ಮಹಿಳಾ ಕಾಂಗ್ರೆಸ್​ ಮುಂದಾಗಿದೆ.

ಈ ಸಂಬಂಧ ಕೆಪಿಸಿಸಿ ಎಲ್ಲಾ ಜಿಲ್ಲೆಗಳ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದು, ಬಡತನದಲ್ಲಿರುವ ಮತ್ತು ಕೆಳ, ಮಧ್ಯಮ ವರ್ಗಗಳ ಮಕ್ಕಳನ್ನು ಗುರುತಿಸಿ ಪಟ್ಟಿ ನೀಡುವಂತೆ ಹೇಳಿದೆ.

ಮಕ್ಕಳಿಗಾಗಿ ಪೌಷ್ಟಿಕ ಆಹಾರದ ವಿಶೇಷ ಕಿಟ್ ಸಿದ್ಧಪಡಿಸಲಾಗಿದ್ದು, ಇದರ ವಿತರಣೆ ಕಾರ್ಯಕ್ಕೆ ಎರಡು ದಿನಗಳ ಹಿಂದೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಸದ್ಯ 1 ಸಾವಿರ ಕಿಟ್​ಗಳನ್ನು ಸಿದ್ಧಪಡಿಸಿರುವ ರಾಜ್ಯ ಸಮಿತಿ, ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿಗಳ ಮುಖಂಡರು ಕಳಿಸುವ ಮಾಹಿತಿ ಆಧಾರದ ಮೇಲೆ ಅಗತ್ಯ ಪ್ರಮಾಣದ ಕಿಟ್​ಗಳನ್ನು ವಿತರಿಸಲು ತೀರ್ಮಾನಿಸಿದೆ. ಎಷ್ಟೇ ಕಿಟ್​ಗಳಿಗೆ ಬೇಡಿಕೆ ಬಂದರೂ ಅದನ್ನು ಬೆಂಗಳೂರಿನ ಪ್ರಧಾನ ಕಚೇರಿಯಿಂದ ಪೂರೈಸುವುದಾಗಿ ರಾಜ್ಯ ಕೈ ನಾಯಕರು ಭರವಸೆ ನೀಡಿದ್ದಾರೆ.

ಮಹಿಳಾ ಕಾಂಗ್ರೆಸ್​ನಿಂದ ಪೌಷ್ಟಿಕ ಆಹಾರದ ಕಿಟ್ ವಿತರಣೆ

ಪೌಷ್ಟಿಕ ಆಹಾರದ ಕಿಟ್​ನಲ್ಲಿ ಏನೇನಿದೆ?

ವಿಟನೆಕ್ಸ್ ಒಂದ್ ಬಾಟಲ್
ಡೋಲೊ ಕೋಲ್ಡ್ ಸಿರಪ್
ಪ್ಯಾರಸಿಟಮಲ್ ಸಿರಪ್
ಚವನ್ ಪ್ರಶ್
ಹಾರ್ಲಿಕ್ಸ್ ಪ್ಯಾಕೇಟ್
ಬೂಸ್ಟ್ ಪ್ಯಾಕೇಟ್
ಪಾರ್ಲೆ ಜಿ ಬಿಸ್ಕೇಟ್
ಎರಡು ಮಾಸ್ಕ್
ಒಂದು ಸಂತೂರ್ ಸೋಪ್

ಈ ಕುರಿತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾಹಿತಿ ನೀಡಿದ್ದು, ಕೋವಿಡ್ ಮೂರನೇ ಅಲೆ ಸಂದರ್ಭ ಯಾವುದೇ ಮಕ್ಕಳು ಸಮಸ್ಯೆಗೆ ಒಳಗಾಗಬಾರದು ಹಾಗೂ ಜೀವ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಈ ಒಂದು ಪ್ರಯತ್ನ ಮಾಡಿದ್ದೇವೆ. ಕೋವಿಡ್ ಮೂರನೇ ಅಲೆ ಬರಬೇಕು ಎಂದು ನಾವು ಬಯಸುತ್ತಿಲ್ಲ. ಮಕ್ಕಳ ಆರೋಗ್ಯ ಅತ್ಯಂತ ಮುಖ್ಯ. ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಮ್ಮ ನಾಯಕರು ನೀಡಿದ ಮಾಹಿತಿಯನ್ನು ಸರ್ಕಾರ ಉಡಾಫೆಯಿಂದ ನೋಡುತ್ತಿದೆ. ಮಕ್ಕಳ ಆರೋಗ್ಯ ಅತ್ಯಂತ ಸೂಕ್ಷ್ಮ ವಿಚಾರ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಕ್ಕಳಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅಗತ್ಯ ಪ್ರಮಾಣದ ಬೆಡ್ ಹಾಗೂ ಆಮ್ಲಜನಕ ಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ದೊಡ್ಡವರಿಗೆ ಲಸಿಕೆ ಕೊಡುವಲ್ಲಿ ಸರ್ಕಾರ ವಿಫಲವಾಗಿದ್ದು, ಇನ್ನು ಮಕ್ಕಳಿಗೆ ಯಾವಾಗ ಲಸಿಕೆ ನೀಡಲಿದೆ. ದೇಶದ ಭವಿಷ್ಯವಾಗಿರುವ ಮಕ್ಕಳ ಆರೈಕೆಯ ಜವಾಬ್ದಾರಿ ಯಾರದ್ದು? ಸರ್ಕಾರ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳಬೇಕು. ನಾವು ಸಹ ವಿಶೇಷ ಕಿಟ್ ಸಿದ್ಧಪಡಿಸಿದ್ದೇವೆ. ದಿಢೀರ್ ಮಕ್ಕಳಿಗೆ ಅನಾರೋಗ್ಯವಾದರೆ ಅವರನ್ನು ಕಾಪಾಡುವುದು ಕಷ್ಟ ಸಾಧ್ಯ. ಒಂದೊಮ್ಮೆ ಮೂರನೇ ಅಲೆ ದೊಡ್ಡಮಟ್ಟದಲ್ಲಿ ಕಾಡಿದರೆ ಮಕ್ಕಳನ್ನು ಅದಕ್ಕಿಂತ ಮುಂಚಿತವಾಗಿ ಎದುರಿಸಲು ಸಿದ್ಧಪಡಿಸುವ ಕಿಟ್ ನಾವು ನೀಡುತ್ತಿದ್ದೇವೆ. ಆಯುರ್ವೇದ ಪದ್ಧತಿಯ ಆಹಾರವನ್ನು ಸಿದ್ಧಪಡಿಸಿ ಮಕ್ಕಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details