ಬೆಂಗಳೂರು:ಆನ್ಲೈನ್ನಲ್ಲಿ ಯುವತಿಯೊಬ್ಬರು ಟಾಪ್ ಬುಕ್ ಮಾಡಲು ಹೋಗಿ ಎಂಬತ್ತು ಸಾವಿರ ರೂ. ಹಣ ಕಳೆದುಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಶ್ರವಣ ಮೋಸ ಹೋದ ಯುವತಿ. ಇವರು ಕೆಲವು ದಿನಗಳ ಹಿಂದೆ ಇ ಕಾಮರ್ಸ್ ಆ್ಯಪ್ನಲ್ಲಿ ಟಾಪ್ ಬುಕ್ ಮಾಡಿದ್ದರು. ಆದ್ರೆ ಡೆಲಿವರಿ ಸಿರದ ಕಾರಣ ಮತ್ತೆ ಕಸ್ಟಮರ್ ಸರ್ವೀಸ್ಗೆ ಕರೆ ಮಾಡಿ ತಿಳಿಸಿದ್ದಾರೆ. ಅವರು ಆಕೆಗೆ ಅಪ್ಲಿಕೇಶನ್ ಕಳಿಸಿ ಫಿಲ್ ಮಾಡಲು ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ಯುವತಿಗೆ ಮೋಸ ಈ ವೇಳೆ ಶ್ರವಣ ಅಪ್ಲಿಕೇಶನ್ನಲ್ಲಿ ಬ್ಯಾಂಕ್ ಡಿಟೇಲ್ಸ್ ಫಿಲ್ ಮಾಡಿದ್ದಾರೆ. ಕೆಲ ನಿಮಿಷದಲ್ಲಿ ಮಹಿಳೆಗೆ ಕಸ್ಟಮರ್ ಕೇರ್ ವ್ಯಕ್ತಿ ಓಟಿಪಿ ಕಳುಹಿಸಲು ತಿಳಿಸಿದ್ದಾನೆ. ಇದನ್ನು ನಂಬಿ ಅವರು ಓಟಿಪಿ ನಂಬರ್ ಕೂಡ ಕಳುಹಿಸಿದ್ದಾರೆ. ಬಳಿಕ ತಕ್ಷಣ ಅಕೌಂಟ್ನಿಂದ 80, 000ರೂ.ಕಟ್ ಆಗಿದೆ.
ನಂತರ ಇದು ಆನ್ ಲೈನ್ ಫ್ರಾಡರ್ಸ್ ಕೆಲಸ ಎಂದು ತಿಳಿದ ಮಹಿಳೆ, ಸೈಬರ್ ಠಾಣೆ ಮೆಟ್ಟಿಲೆರಿದ್ದಾಳೆ. ಈ ಪ್ರಕರಣ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದ ಕಾರಣ ಪೊಲೀಸರು ಕೋಣನಕುಂಟೆ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಕೆ ಮುಂದುವರೆಸಿದ್ದಾರೆ.