ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಂಗಾಂಗ ಕಸಿ ಪ್ರಕ್ರಿಯೆ ನಡೆಯುವುದು ಸಾಮಾನ್ಯವಾಗಿದೆ. ಆದರೆ ಹೃದಯ, ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿರುವವರಿಗೆ ಅಂಗಾಂಗ ಅವಶ್ಯಯವಿದ್ದು ಲಕ್ಷಾಂತರ ಮಂದಿ ಈ ಚಿಕಿತ್ಸೆಯ ನೆರವಿಗಾಗಿ ಕಾಯುತ್ತಿದ್ದಾರೆ. ಈ ನಡುವೆಯು ಹಲವು ಕುಟುಂಬಗಳು ತಮ್ಮವರನ್ನೇ ಕಳೆದುಕೊಂಡ ನೋವಿನಲ್ಲೂ ಅಂಗಾಂಗ ದಾನ ಮಾಡುವ ನಿಸ್ವಾರ್ಥ ಸೇವೆ ಮಾಡುತ್ತಿವೆ.
ಈಗ ಮೆದುಳು ನಿಷ್ಕ್ರಿಯಗೊಂಡಿದ್ದ 36 ವರ್ಷದ ಮಹಿಳೆಯ ಹೃದಯವನ್ನು ಆಂಧ್ರಪ್ರದೇಶದ 38 ವರ್ಷದ ಮಹಿಳೆಗೆ ಕಸಿ ಮಾಡಲಾಗುತ್ತಿದೆ. ನಗರ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಹಾರ್ಟ್ ಸರ್ಜನ್ ಡಾ. ನಾಗಮಲ್ಲೇಶ್ ನೇತೃತ್ವದಲ್ಲಿ ಹೃದಯ ಕಸಿ ನಡೆಯಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, 35ನೇ ಹೃದಯ ಕಸಿ ಮಾಡಲಾಗುತ್ತಿದ್ದು, 38 ವರ್ಷದ ಮಹಿಳೆಗೆ, ಮೆದುಳು ನಿಷ್ಕ್ರಿಯಗೊಂಡಿರುವ 36 ವರ್ಷ ಮಹಿಳೆಯ ಹಾರ್ಟ್ ಟ್ರಾನ್ಸ್ಪ್ಲಾಂಟ್ ಮಾಡಲಾಗುತ್ತಿದೆ ಎಂದಿದ್ದಾರೆ.