ಬೆಂಗಳೂರು:ನಗರದ ಟೌನ್ ಹಾಲ್ ಬಳಿ ಇರುವ ದಾಸಪ್ಪ ಆಸ್ಪತ್ರೆಗೆ ನಿನ್ನೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಬಾಯಿ ಭೇಟಿ ನೀಡಿ ಆಸ್ಪತ್ರೆಯ ಕಾಮಗಾರಿಯನ್ನು ಪರಿಶೀಲಿಸಿದರು.
ದಾಸಪ್ಪ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ - ರಾಜ್ಯ ಮಹಿಳಾ ಆಯೋಗ
ಬೆಂಗಳೂರು ನಗರದ ಟೌನ್ ಹಾಲ್ ಬಳಿ ಇರುವ ದಾಸಪ್ಪ ಆಸ್ಪತ್ರೆಗೆ ನಿನ್ನೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಬಾಯಿ ಭೇಟಿ ನೀಡಿ ಆಸ್ಪತ್ರೆಯ ಕಾಮಗಾರಿ ಪರಿಶೀಲಿಸಿ, ಮಾಹಿತಿ ಪಡೆದರು.
ಸಾರ್ವಜನಿಕರ ದೂರಿನ ಹಿನ್ನೆಲೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕುರಿತು ವಿಚಾರಣೆ ನಡೆಸಿದರು. ಅಲ್ಲದೆ 1950ರಲ್ಲಿ ಸ್ಥಾಪನೆಯಾದ ಆಸ್ಪತ್ರೆಯ ನವೀಕರಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಶೀಘ್ರವೇ ಆಸ್ಪತ್ರೆಯ ನವೀಕರಣ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಕೆಲ ವೈದ್ಯಾಧಿಕಾರಿಗಳು ಹಾಜರಾಗಿಲ್ಲ ಎಂದು ಅಲ್ಲಿನ ಕೆಲಸಗಾರರು ತಿಳಿಸಿದ್ದು, ಇದನ್ನ ಪರಿಶೀಲನೆ ನಡೆಸಲಾಗುವುದಾಗಿ ಡಾ. ನಾಗಲಕ್ಷ್ಮಿ ಬಾಯಿ ತಿಳಿಸಿದರು.
ಸದ್ಯ, ದಾಸಪ್ಪ ಆಸ್ಪತ್ರೆಯ ನವೀಕರಣ ನಡೆಯುತ್ತಿರುವುದರಿಂದ ಸಿದ್ದಯ್ಯ ರಸ್ತೆಯಲ್ಲಿರುವ ರಫೆಲ್ ಆಸ್ಪತ್ರೆಗೆ ರೋಗಿಗಳನ್ನು ವರ್ಗಾಯಿಸಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.