ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕಾರ್ಯಕ್ರಮವೊಂದರಲ್ಲಿ ಮಹಿಳೆ ಕಿಸ್ ಮಾಡಿದ್ದಂತಹ ಘಟನೆ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಎದುರಿಸಬೇಕಾಗಿದೆ. ಜನಸೇವಕ ಕಾರ್ಯಕ್ರಮದ ವೇಳೆ ಮನೆ ಬಾಗಿಲಿಗೆ ಬಂದ ಮುಖ್ಯಮಂತ್ರಿಗಳ ಕೈಗೆ ಮಹಿಳೆಯೊಬ್ಬರು ಕಿಸ್ ಕೊಟ್ಟಿದ್ದಾರೆ.
ನಗರದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಜನಸೇವಕ ಕಾರ್ಯಕ್ರಮದ ಅಡಿ ಸಾಂಕೇತಿಕವಾಗಿ ಕೆಲ ಮನೆಗಳಿಗೆ ತೆರಳಿದ ಸಿಎಂ, ಸರ್ಕಾರದ ಸೇವೆಗಳ ಬಗ್ಗೆ ತಿಳಿಸಿದರು. ಈ ವೇಳೆ ಒಂದು ಮನೆಗೆ ಬಳಿ ತೆರಳಿದಾಗ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕೈಹಿಡಿದುಕೊಂಡ ಮಹಿಳೆ ಕಿಸ್ ಕೊಟ್ಟಿದ್ದಾರೆ.
ಬಸವರಾಜ್ ಬೊಮ್ಮಾಯಿ ಅವರ ಬಲಗೈಯಿಗೆ ಬಿಟ್ಟು ಬಿಡದ ಹಾಗೆ ಪದೇಪದೆ ಕಿಸ್ ಕೊಡುತ್ತಲೇ ಇದ್ದರು. ನಂತರ ಕೈಯನ್ನು ಕೆನ್ನೆ ಮೇಲಿಟ್ಟುಕೊಂಡು ಮುದ್ದಾಡಿ ಕೈ ಮುಗಿದಿದ್ದಾರೆ.
ಸಿಎಂ ಪಕ್ಕದಲ್ಲೇ ಇದ್ದ ಸಚಿವ ಅಶ್ವತ್ಥ್ ನಾರಾಯಣ ಮಹಿಳೆ ವಿರುದ್ಧ ಗರಂ ಆಗಿ, ಹೀಗೆಲ್ಲಾ ಮಾಡೋದು ಸರಿಯಲ್ಲ ಅಂತಾ ಕಿವಿಮಾತು ಹೇಳಿದ್ದಾರೆ.
ಬಿಟ್ಟುಬಿಡದೆ ಸಿಎಂ ಕೈಗೆ ಕಿಸ್ ಕೊಟ್ಟ ಮಹಿಳೆ.. ಈ ಹಿಂದೆಯೂ ಮುಖ್ಯಮಂತ್ರಿಗಳಿಗೆ ಮಹಿಳೆ ಕಿಸ್ ಕೊಟ್ಟ ಘಟನೆಗಳು ನಡೆದಿವೆ. ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯನವರು ಕೂಡ ಇಂತಹ ಸ್ಥಿತಿ ಎದುರಿಸಿದ್ದರು. ಈಗ ಬೊಮ್ಮಾಯಿ ಇಂತಹ ಸ್ಥಿತಿ ಎದುರಿಸಬೇಕಾಯ್ತು.