ಬೆಂಗಳೂರು:ನಗರದಲ್ಲಿ ನಿತ್ಯ ಉಂಟಾಗುವ ಸಂಚಾರಿ ದಟ್ಟಣೆ, ವಿಐಪಿ ಕಾರ್ಯಕ್ರಮಗಳ ಭದ್ರತೆಯ ಜಂಜಾಟದ ನಡುವೆಯೂ ರಾಜಧಾನಿಯ ರಾಜಾಜಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹುಲಿಗಮ್ಮ ಎಂಬುವವರಿಗೆ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಸೋಮವಾರ ಠಾಣೆಯಲ್ಲಿ ಸೀಮಂತ ಕಾರ್ಯ ಮಾಡಿದ್ದಾರೆ (baby shower function in Police station).
ಕೊಪ್ಪಳ ಮೂಲದ ಹುಲಿಗಮ್ಮ ನಾಲ್ಕು ವರ್ಷಗಳಿಂದ ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ (Rajajinagar Traffic Police Station) ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಕಳೆದುಕೊಂಡಿರುವ ಹುಲಿಗಮ್ಮಗೆ ತಾಯಿ ಸ್ಥಾನದಲ್ಲಿ ನಿಂತು ಠಾಣಾಧಿಕಾರಿ ಶಿವರತ್ನಾ ಹಾಗೂ ಸಿಬ್ಬಂದಿ ಸೀಮಂತ ಕಾರ್ಯ ಪೂರೈಸಿ ಹಾರೈಸಿದ್ದಾರೆ