ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಶಾಲಾ ಬಸ್​ನಲ್ಲೇ ಅತ್ಯಾಚಾರ: ಆರೋಪಿ ಚಾಲಕ‌ ಅರೆಸ್ಟ್ - ಚಂದ್ರಾಲೇಔಟ್ ಪೊಲೀಸರು

ಬೆಂಗಳೂರಿನಲ್ಲಿ ಶಾಲಾ ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ, ನಂತರ ಮಹಿಳೆಯನ್ನು ಅಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ.

woman-raped-in-school-bus-on-the-pretext-of-dropping-in-bengaluru
ಬೆಂಗಳೂರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಶಾಲಾ ಬಸ್​ನಲ್ಲೇ ಆತ್ಯಾಚಾರ: ಆರೋಪಿ ಚಾಲಕ‌ ಅರೆಸ್ಟ್

By

Published : Nov 30, 2022, 8:02 PM IST

ಬೆಂಗಳೂರು:ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಕೃತ್ಯಯೊಂದು ನಡೆದಿದೆ. ಡ್ರಾಪ್​ ಕೊಡುವ ಸೋಗಿನಲ್ಲಿ ಮಹಿಳೆಯನ್ನು ಶಾಲಾ ಬಸ್​ಗೆ ಹತ್ತಿಸಿಕೊಂಡು ಅತ್ಯಾಚಾರವೆಸಗಿದ ಆರೋಪದ ಮೇಲೆ ಬಸ್​ ಚಾಲಕನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್ ಎಂಬಾತನೇ ಬಂಧಿತ ಶಾಲಾ ಬಸ್​ ಚಾಲಕನಾಗಿದ್ದು, ಈತ ಖಾಸಗಿ ಶಾಲೆಯೊಂದರ ಸ್ಕೂಲ್ ಬಸ್ ಚಾಲಕನಾಗಿ ಇತ್ತೀಚೆಗಷ್ಟೇ ಕೆಲಸ‌ಕ್ಕೆ ಸೇರಿಕೊಂಡಿದ್ದ‌‌. ನಿನ್ನೆ (ಮಂಗಳವಾರ) ಸಂಜೆ ಎಂದಿನಂತೆ ಶಾಲಾ ಮಕ್ಕಳನ್ನು ಡ್ರಾಪ್ ಮಾಡಿ ನಾಯಂಡಹಳ್ಳಿ ಬಳಿ ಹೋಗುತ್ತಿರುವಾಗ ಡ್ರಾಪ್ ಕೊಡುವ ಸೋಗಿನಲ್ಲಿ ಮಹಿಳೆಯನ್ನು ಬಸ್​ಗೆ ಹತ್ತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಸ್ವಲ್ಪ ದೂರ ಹೋಗಿ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿ, ಬಸ್​ನಲ್ಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ‌‌. ಬಳಿಕ ಮಹಿಳೆಯನ್ನು ಅಲ್ಲೇ ಬಿಟ್ಟು ಶಿವಕುಮಾರ್​ ಪರಾರಿಯಾಗಿದ್ದ. ಇತ್ತ, ಸಂತ್ರಸ್ತ ಮಹಿಳೆ ಬಸ್​ ಫೋಟೋ ತೆಗೆದುಕೊಂಡಿದ್ದು, ಮಗನಿಗೆ ಪೋನ್​ ಮಾಡಿ ವಿಷಯ ತಿಳಿಸಿದ್ದಾರೆ. ತಾಯಿ ನೀಡಿದ ಮಾಹಿತಿ ಮೇರೆಗೆ ಆಕೆಯ ಮಗ ಬಸ್ ಚಾಲಕನನ್ನು ಪತ್ತೆ ಮಾಡಿ, ಹಿಡಿದು ಥಳಿಸಿದ್ದಾನೆ.

ಅಲ್ಲಿಂದ ಚಂದ್ರಾಲೇಔಟ್ ಪೊಲೀಸರಿಗೆ ಈ ಘಟನೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ: ವಕೀಲನಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​

ABOUT THE AUTHOR

...view details