ಕರ್ನಾಟಕ

karnataka

ETV Bharat / state

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ‌  ಪತ್ತೆ, ಪೋಷಕರಿಂದ ಕೊಲೆ ಆರೋಪ - ಮೈಸೂರಿನಲ್ಲಿ ಮಹಿಳೆ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ‌ಯ ಮೃತದೇಹ ಪತ್ತೆಯಾಗಿದ್ದು, ಪೋಷಕರು ಕೊಲೆ ಎಂದು ಆರೋಪಿಸಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

Woman found dead under mysterious circumstances in Mysore, Woman dead body found in Mysore, Mysore crime news, ಮೈಸೂರಿನಲ್ಲಿ ನಿಗೂಢ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಮೈಸೂರಿನಲ್ಲಿ ಮಹಿಳೆ ಮೃತದೇಹ ಪತ್ತೆ, ಮೈಸೂರು ಅಪರಾಧ ಸುದ್ದಿ,
ಪೋಷಕರಿಂದ ಕೊಲೆ ಶಂಕೆ ಆರೋಪ

By

Published : May 18, 2022, 1:01 PM IST

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ‌ಯ ಶವ ದೊರೆತಿದ್ದು, ಇದು ಕೊಲೆ‌ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಮಾಯಣ್ಣ ಬಡಾವಣೆಯಲ್ಲಿರುವ ಗಂಡನ ಮನೆಯಲ್ಲಿ ನೇಣುಬಿಗಿದ ರೀತಿಯಲ್ಲಿ ಚಂಪಕಮಾಲಿನಿ ಎಂಬ ಮಹಿಳೆಯ ಮೃತದೇಹ ಕಂಡುಬಂದಿದೆ. ಶಿವಮೊಗ್ಗ ಮೂಲದ ಈಕೆ 13 ವರ್ಷಗಳ ಹಿಂದೆ ನಂಜನಗೂಡಿನ ವಿದ್ಯಾನಂದ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 12 ವರ್ಷದ ಮಗಳು ಮತ್ತು ನಾಲ್ಕು ವರ್ಷದ ಮಗನಿದ್ದಾನೆ. ಮದುವೆ ಆದಂದಿನಿಂದಲೂ ಪತ್ನಿಗೆ ಪತಿ‌ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಕಾಲು ತೊಳೆಯಲು ನದಿಗೆ ತೆರಳಿದ ಗೃಹಿಣಿ.. ಸೆಲ್ಫಿ ಕ್ಲಿಕ್ಕಿಸುತ್ತ ಜಾರಿ ಬಿದ್ದು ಸಾವು

ಪತಿಯ ವರ್ತನೆಯಿಂದ ಬೇಸತ್ತು ಚಂಪಕಮಾಲಿನಿ ಡಿವೋರ್ಸ್​ಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೆಲ ದಿನಗಳ ನಂತರ ಹಿರಿಯರ ಸಮ್ಮುಖದಲ್ಲಿ ರಾಜಿಸಂಧಾನ ಮಾಡಿ ಇಬ್ಬರನ್ನೂ ಒಂದುಮಾಡಲಾಗಿತ್ತು. ಹೀಗಿದ್ರೂ ವಿದ್ಯಾನಂದ ತನ್ನ ವರ್ತನೆ ಬದಲಾಯಿಸಿಕೊಳ್ಳದೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಮೇ 13 ರಂದು ಚಂಪಕಮಾಲಿನಿ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಸಾವು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಪೊಲೀಸರು ವಿದ್ಯಾನಂದನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ABOUT THE AUTHOR

...view details