ಕರ್ನಾಟಕ

karnataka

ETV Bharat / state

ಬೆಂಗಳೂರು: ಬಿರುಗಾಳಿಗೆ ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಯುವತಿ ಸಾವು - Bangalore Woman death news

ನಿನ್ನೆ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ ರಸಭಸಕ್ಕೆ ರಾಮಣ್ಣ ಬ್ಲಾಕ್ ನಂದಿನಿ ಲೇಔಟ್ ಬಳಿ‌ ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆಗಳು ಮಹಿಳೆಯ ತಲೆ ಮೇಲೆ ಬಿದ್ದಿವೆ. ಪರಿಣಾಮ ಯುವತಿ ಸ್ಥಳದಲ್ಲೆ ಮೃತ ಪಟ್ಟಿದ್ದಾಳೆ.

Woman death in Bangalore
ಮಹಿಳೆ ಸಾವು

By

Published : May 27, 2020, 8:03 AM IST

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ ರಸಭಸಕ್ಕೆ ರಾಮಣ್ಣ ಬ್ಲಾಕ್ ನಂದಿನಿ ಲೇಔಟ್ ಬಳಿ‌ ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆಗಳು ಯುವತಿಯ ತಲೆ ಮೇಲೆ ಬಿದ್ದಿವೆ. ಪರಿಣಾಮ ಮಹಿಳೆ ಸ್ಥಳದಲ್ಲೆ ಮೃತ ಪಟ್ಟಿದ್ದಾಳೆ.

ಮೃತಳನ್ನು ಶಿಲ್ಪಾ (22) ಎಂದು ಗುರುತಿಸಲಾಗಿದೆ. ಅಲ್ಲದೆ ಧನುಷ್ ಎಂಬ ಮತ್ತೊಬ್ಬ ಹುಡುಗನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ABOUT THE AUTHOR

...view details