ಬೆಂಗಳೂರು: ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಮೃತಳಾದ ಬಾಲಕಿಯನ್ನು ನೆನೆದು ಟ್ರಾಫಿಕ್ ಮಹಿಳಾ ಕಾನ್ಸ್ಟೇಬಲ್ ಕಣ್ಣೀರಿಟ್ಟಿದ್ದಾರೆ.
ನಿನ್ನೆ ಹೆಬ್ಬಾಳ ಬಳಿ 13 ವರ್ಷದ ಬಾಲಕಿ ಅಕ್ಷತಾ ಡಿವೈಡರ್ ಮೂಲಕ ರಸ್ತೆ ದಾಟುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಈ ದೃಶ್ಯವನ್ನು ಕಣ್ಣಾರೆ ಕಂಡ ಆರ್ಟಿ ನಗರ ಸಂಚಾರಿ ಕಾನ್ಸ್ಟೇಬಲ್ ಮಾಧುರಿ ಬಿಕ್ಕಿ ಬಿಕ್ಕಿ ಅತ್ತರು. ಈ ದೃಶ್ಯ ಪೊಲೀಸರು ಅಂದ್ರೆ ಕನಿಕರ ಇಲ್ಲದವರು ಎಂಬ ಮಾತಿಗೆ ವಿರುದ್ಧವಾಗಿತ್ತು.