ಬೆಂಗಳೂರು: ಬಾಯ್ಫ್ರೆಂಡ್ ಫೋನ್ನಲ್ಲಿ ತನ್ನ ಹಾಗೂ ತನ್ನ ಸಹೋದ್ಯೋಗಿಯೊಬ್ಬರು ಸೇರಿದಂತೆ ವಿವಿಧ ಮಹಿಳೆಯರ 13 ಸಾವಿರ ನಗ್ನ ಫೋಟೋಗಳನ್ನು ಕಂಡ ಯುವತಿಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 22 ವರ್ಷದ ಯುವತಿ ಅಚಾನಕ್ಕಾಗಿ ತನ್ನ ಪ್ರಿಯತಮನ ಫೋನ್ ಗ್ಯಾಲರಿಯನ್ನು ತೆರೆದಾಗ ಆಘಾತಕ್ಕೆ ಒಳಗಾಗಿದ್ದು, ಈ ಬಗ್ಗೆ ವೈಟ್ ಫೀಲ್ಡ್ ಸೈಬರ್ ಕ್ರೈಂ ಠಾಣೆಗೆ ದೂರು ಕೂಡಾ ನೀಡಲಾಗಿದೆ.
ಸಂತ್ರಸ್ತ ಯುವತಿಯು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಯುವಕನೊಬ್ಬನೊಂದಿಗೆ ಸಂಬಂಧದಲ್ಲಿದ್ದರು. ಆತ ಸಹ ಐದು ತಿಂಗಳುಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಸಂಬಂಧದಲ್ಲಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತಮ್ಮಿಬ್ಬರ ಕೆಲ ಆತ್ಮೀಯ ಕ್ಷಣಗಳ ವಿಡಿಯೋವನ್ನ ಸಂತ್ರಸ್ತೆ ಡಿಲೀಟ್ ಮಾಡಲು ಮುಂದಾಗಿದ್ದರು. ಪ್ರಿಯತಮನ ಫೋನ್ ಅನ್ನು ಆತನಿಗೆ ತಿಳಿಯದೇ ತೆಗೆದುಕೊಂಡು ಫೋಟೋ ಗ್ಯಾಲರಿ ತೆರೆದಿದ್ದರು.