ಬೆಂಗಳೂರು: ತವರು ಮನೆಗೆ ಕರೆದುಕೊಂಡು ಹೋಗು ಎಂದು ಗಂಡನ ಜೊತೆ ಹಠ ಮಾಡ್ತಿದ್ದ ಗೃಹಿಣಿ ಕೋಪದಿಂದ ನೇಣಿಗೆ ಶರಣಾಗಿರುವ ಘಟನೆ ಮೈಕೋಲೇಔಟ್ ಠಾಣಾ ವ್ಯಾಪ್ತಿಯ ಬಿಳೇಕಹಳ್ಳಿ ಬಳಿ ನಡೆದಿದೆ.
ತವರಿಗೆ ಕಳುಹಿಸು ಎಂದು ದುಂಬಾಲು: ಗಂಡನ ನಿರಾಕರಣೆಗೆ ನೊಂದ ಹೆಂಡತಿ ನೇಣಿಗೆ ಶರಣು - ಬೆಂಗಳೂರು
ತವರು ಮನೆಗೆ ಕರೆದುಕೊಂಡು ಹೋಗು ಎಂದು ಪತ್ನಿ ಪತಿಗೆ ಗಂಟು ಬಿದ್ದಿದ್ದಳು, ಆದರೆ ಆಕೆಯ ಮಾತಿಗೆ ಒಲ್ಲೆ ಎಂದ ಗಂಡನ ಮೇಲೆ ಕೋಪಗೊಂಡ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ನೇಪಾಳ ಮೂಲದ ಭಾಗೀರಥಿ(28) ಆತ್ಮಹತ್ಯೆಗೆ ಶರಣಾದ ವಿವಾಹಿತೆ. ಮೂರು ವರ್ಷಗಳ ಹಿಂದೆ ಸೋನು ಸಿಂಗ್ ಎಂಬಾತನೊಂದಿಗೆ ಭಾಗೀರಥಿಗೆ ವಿವಾಹವಾಗಿತ್ತು. ಬಳಿಕ ಬೆಂಗಳೂರಿನ ಮೈಕೋಲೇಔಟ್ ಠಾಣಾ ವ್ಯಾಪ್ತಿಯ ಬಿಳೇಕಹಳ್ಳಿ ಬಳಿ ವಾಸವಿದ್ದರು. ಆದರೆ, ಕಳೆದ ಕೆಲ ವಾರದಿಂದ ಪತಿ ಜೊತೆ ನೇಪಾಳಕ್ಕೆ ಕರೆದೊಯ್ಯುವಂತೆ ಹಠ ಮಾಡಿದ್ದಾಳೆ. ಆದರೆ ಕೊರೊನಾ ಇರುವ ಕಾರಣ ಪತಿ ನಿರಾಕರಿಸಿದ್ದಾನೆ. ಹೀಗಾಗಿ ಕೋಪಗೊಂಡ ಹೆಂಡತಿ, ಗಂಡ ಹೊರ ಹೋಗಿದ್ದ ವೇಳೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ.
ಸದ್ಯ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.