ಕರ್ನಾಟಕ

karnataka

ETV Bharat / state

ಗಂಡನ ಸಾವಿನಿಂದ ಖಿನ್ನತೆ.. ಗೃಹಿಣಿ ಆತ್ಮಹತ್ಯೆ, ಒಂದೂವರೆ ವರ್ಷದ ಮಗು ಅನಾಥ - ಗೃಹಿಣಿ ಆತ್ಮಹತ್ಯೆ

ಕಾಡುಗೋಡಿಯ ಓಫಾರಂ ಬಳಿಯಿರುವ ಮನೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಸೌಂದರ್ಯ (24)
ಸೌಂದರ್ಯ (24)

By

Published : Dec 18, 2022, 3:29 PM IST

Updated : Dec 18, 2022, 3:42 PM IST

ಬೆಂಗಳೂರು: ಗಂಡನ ಸಾವಿನ ನೋವಿನಿಂದ‌ ಹೊರಬರಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಸೌಂದರ್ಯ (24) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ.‌ ನಿನ್ನೆ‌ ಮಧ್ಯಾಹ್ನ ಕಾಡುಗೋಡಿಯ ಓಫಾರಂ ಬಳಿಯಿರುವ ಮನೆಯಲ್ಲಿ ಯಾರೂ ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.‌

ಈಕೆಯ ಗಂಡ ಒಂದೂವರೆ ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಮಾಗಡಿ ರೋಡ್ ನಲ್ಲಿರುವ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ‌ ಸೌಂದರ್ಯ ತವರು ಮನೆಯಲ್ಲಿದ್ದರು. ಗಂಡನ ಸಾವಿನ ನೋವಿನಿಂದ ಹೊರಬರಲಾಗದೆ ಸೌಂದರ್ಯ ಖಿನ್ನತೆಯಿಂದ ಬಳಲುತ್ತಿದ್ದರು.‌ ನಿನ್ನೆ ಮಧ್ಯಾಹ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಓದಿ:ಮಾನಸಿಕ ಖಿನ್ನತೆಯಿಂದ ಮಹಿಳಾ ಟೆಕ್ಕಿ ಆತ್ಮಹತ್ಯೆ

Last Updated : Dec 18, 2022, 3:42 PM IST

ABOUT THE AUTHOR

...view details