ಕರ್ನಾಟಕ

karnataka

ETV Bharat / state

ಬೆಂಗಳೂರು: ಡಾಲರ್ ವಿನಿಮಯ ಸೋಗಿನಲ್ಲಿ ವ್ಯಕ್ತಿಗೆ 98 ಸಾವಿರ ಟೋಪಿ‌ ಹಾಕಿದ‌ ಮಹಿಳೆ - Dollar note exchange

ಆಕೆಯ ಮಾತನ್ನು ನಂಬಿದ ಕುಮಾರ್​ ಹಣ ಹೊಂದಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾನೆ. ಮಾತುಕತೆಯಂತೆ ನ. 17ರಂದು ಯಶವಂತಪುರಕ್ಕೆ ಆಕೆ ಬರುವಂತೆ ಹೇಳಿದ್ದಳು.

ಬೆಂಗಳೂರು: ಡಾಲರ್ ವಿನಿಮಯ ಸೋಗಿನಲ್ಲಿ ವ್ಯಕ್ತಿಗೆ 98 ಸಾವಿರ ಟೋಪಿ‌ ಹಾಕಿದ‌ ಮಹಿಳೆ
ಬೆಂಗಳೂರು: ಡಾಲರ್ ವಿನಿಮಯ ಸೋಗಿನಲ್ಲಿ ವ್ಯಕ್ತಿಗೆ 98 ಸಾವಿರ ಟೋಪಿ‌ ಹಾಕಿದ‌ ಮಹಿಳೆ

By

Published : Nov 23, 2021, 11:05 PM IST

ಬೆಂಗಳೂರು: ಡಾಲರ್​ ನೋಟುಗಳನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿ ಕೊಡಲು ಮುಂದಾದ ವ್ಯಕ್ತಿಗೆ ಮಹಿಳೆಯೊಬ್ಬರು ಯಾಮಾರಿಸಿ 98 ಸಾವಿರ ರೂ. ಟೋಪಿ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

ತಾನು ಕೆಲಸ ಮಾಡುವ ಜಾಗದಲ್ಲಿ ‌ಕಸ ಗುಡಿಸುವಾಗ ಯುಎಸ್​ಎ ಮುಖಬೆಲೆಯ 800 ಡಾಲರ್ ನೋಟುಗಳು ಸಿಕ್ಕಿವೆ ಎಂದಿರುವ ಆಕೆ, ತನ್ನ ಬಳಿಯಿದ್ದ ನೋಟುಗಳನ್ನು ಸ್ಥಳೀಯ ನಿವಾಸಿ ಕುಮಾರ್​ ಎಂಬಾತನಿಗೆ ತೋರಿಸಿದ್ದಾಳೆ.

ಅದನ್ನು ನೋಡಿದ ಕುಮಾರ್​ ಅವರು ಫಾರಿನ್ ಎಕ್ಸ್ ಚೆಂಜ್ ಸೆಂಟರ್​ಗೆ ಹೋಗಿ ಪರಿಶೀಲಿಸಿದ್ದಾರೆ. ಆಗ ಅವು ಅಸಲಿ ನೋಟುಗಳೆಂದು ತಿಳಿದುಬಂದಿದೆ. ಅನಂತರ ಆಕೆ ನನ್ನ ಬಳಿಯಿರುವ ಡಾಲರ್​ಗಳನ್ನು ಭಾರತೀಯ ನೋಟುಗಳಾಗಿ ಪರಿವರ್ತಿಸಿ 1 ಲಕ್ಷ ರೂಪಾಯಿ ನೀಡುವಂತೆ‌ ಕೇಳಿದ್ದಾಳೆ.

ಆಕೆಯ ಮಾತನ್ನು ನಂಬಿದ ಕುಮಾರ್​ ಹಣ ಹೊಂದಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾನೆ. ಮಾತುಕತೆಯಂತೆ ನ. 17ರಂದು ಯಶವಂತಪುರಕ್ಕೆ ವಂಚಕಿ ಕುಮಾರ್​ಗೆ ಬರುವಂತೆ ಹೇಳಿದ್ದಾಳೆ.‌

ಇದರಂತೆ ಭೇಟಿಯಾದ ಕುಮಾರ್​ಗೆ ಬಟ್ಟೆಯಲ್ಲಿ ಸುತ್ತಿದ ವಸ್ತುವನ್ನು ಹಣವೆಂದು ನೀಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಕುಮಾರ್ 98 ಸಾವಿರ ರೂಪಾಯಿ ನೀಡುತ್ತಿದ್ದಂತೆ ವಂಚಕಿ ಕ್ಷಣಾರ್ಧದಲ್ಲಿ ತಲೆಮರೆಸಿಕೊಂಡಿದ್ದಾಳೆ.‌

ಬಂಡಲ್ ಬಿಚ್ಚಿ ನೋಡಿದಾಗ ಖಾಲಿ ಹಾಳೆ ಇರುವುದು ಗೊತ್ತಾಗಿ ತಾನು ಮೋಸ ಹೋಗಿದ್ದೇನೆ ಎಂಬುದು ಅವರಿಗೆ ಮನವರಿಕೆಯಾಗಿದೆ. ಈ ಕುರಿತು ಯಶವಂತಪುರ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನಲೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ‌‌ ದಾಖಲಿಸಿಕೊಂಡಿರುವ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.‌

ಓದಿ:ಬಿಟ್‌ಕಾಯಿನ್​ ಹೂಡಿಕೆಯಲ್ಲಿ 10 ಲಕ್ಷ ರೂ. ಕಳೆದುಕೊಂಡು ಕಳ್ಳತನದ ಕಥೆ ಕಟ್ಟಿದ ವ್ಯಕ್ತಿ

ABOUT THE AUTHOR

...view details