ಬೆಂಗಳೂರು: ಕೆಲಸ ಕೊಡಿಸುವುದಾಗಿ ಅಸಲಿ ಕಂಪೆನಿಗಳ ಹೆಸರಿನಲ್ಲಿ ವ್ಯಕ್ತಿಯೊಬ್ಬ ಯುವತಿಗೆ ₹1.97 ಲಕ್ಷ ವಂಚಿಸಿರುವ ಪ್ರಕರಣ ನಡೆದಿದೆ.
ಎಚ್ಚರ! ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಪೀಕುವ ಜನರಿದ್ದಾರೆ! - ಬೆಂಗಳೂರಿನಲ್ಲಿ ಯುವತಿಗೆ ಕೆಲಸ ಕೊಡಿಸುವುದಾಗಿ ವಂಚನೆ
ಬೆಂಗಳೂರಿನ ಯುವತಿಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ₹1.97 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯವತಿಗೆ ವಂಚನೆ
ಲಕ್ಷ್ಮಿ ಎಂಬುವವರಿಗೆ ಉದ್ಯೋಗ ಕೊಡಿಸುವುದಾಗಿ ಶೈನ್.ಕಾಂ ಹೆಸರಿನಲ್ಲಿ ವಂಚಿಸಲಾಗಿದೆ.ಕೆಲಸಕ್ಕಾಗಿ ಯುವತಿಯು ಈ ವೆಬ್‌ಸೈಟ್‌ನಲ್ಲಿ ತನ್ನ ವಿವರಗಳನ್ನ ನೋಂದಾಯಿಸಿದ್ದರು. ಈ ಮೂಲಕ ಆರೋಪಿ ಮಹಿಳೆಯಿಂದ ₹1.97 ಲಕ್ಷ ಪಡೆದಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.