ಕರ್ನಾಟಕ

karnataka

ETV Bharat / state

ಬೆಂಗಳೂರು: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಗಂಡನಿಂದ ಕೊಲೆ ಶಂಕೆ - ETV Bharath Kannada news

ಕೋಲ್ಕತಾ ಮೂಲದ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

woman-body-was-found-
ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

By

Published : Feb 7, 2023, 6:08 PM IST

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ

ಬೆಂಗಳೂರು: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ದೊರೆತಿದೆ. ಹೆಂಡ್ತಿಯನ್ನು ಗಂಡನೇ‌ ಕೊಲೆ‌ ಮಾಡಿರುವ ಅನುಮಾನ ಗೋಚರಿಸಿದೆ. ಕೋಲ್ಕತಾ ಮೂಲದ ಮೊನಿಷ್ ಕತೂಮ್ ಸಾವನ್ನಪ್ಪಿದ್ದಾರೆ. ಪತಿ ಶೇಖ್ ಮಜಿದ್ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿವರ: ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ವರ್ತೂರಿನಲ್ಲಿ ವಾಸವಾಗಿದ್ದರು. ಮಜೀದ್ ಟೈಲ್ಸ್ ಕೆಲಸ ಮಾಡುತ್ತಿದ್ದರೆ ಮೊನಿಷ್ ಗೃಹಿಣಿಯಾಗಿದ್ದರು. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಈ ಮಧ್ಯೆ ಅವರಿಬ್ಬರ‌ ನಡುವೆ‌‌ ಏನಾಯಿತೋ ಗೊತ್ತಿಲ್ಲ. ಇಂದು ಕೊಳೆತ ಸ್ಥಿತಿಯಲ್ಲಿ ಮೊನಿಷಾ ಶವವಾಗಿ ಕಂಡುಬಂದಿದ್ದಾರೆ. ಕಳೆದ‌ೆರಡು ದಿನಗಳಿಂದ ಲಾಕ್ ಆಗಿದ್ದ ಮನೆಯಿಂದ ದುರ್ವಾಸನೆ ಬಂದಿದ್ದು ನೆರೆಹೊರೆ ಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆ‌ ಕಿಟಕಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

"ಕುತ್ತಿಗೆ ಬಿಗಿದು ಸಾಯಿಸಿರುವುದು ಕಂಡು ಬಂದಿದೆ. ಮೃತದೇಹದ ಮೇಲೆ‌ ಬೇರೆ ಗಾಯದ ಗುರುತಿಲ್ಲ. ಕಾನೂನು‌ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ. ಮಜೀದ್ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್‌ ಸ್ವಿಚ್ ಆಫ್‌ ಆಗಿದೆ.‌ ಕೊಲೆ‌‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ" ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ: ಮಹಿಳೆಯ ಬಂಧನ

ಬಿಎಂಟಿಸಿ ಚಾಲಕನ ಸಾವಿನ ಪ್ರಕರಣಕ್ಕೆ ತೆರೆ:ಬೆಂಗಳೂರಿನ ಲಾಡ್ಜ್​ನಲ್ಲಿ ಬಿಎಂಟಿಸಿ ಚಾಲಕನ ಅನುಮಾನಾಸ್ಪದ ಸಾವು ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ. ವಿವಾಹಿತಳ ಹಿಂದೆ ಬಿದ್ದ ಚಾಲಕ ಪುಟ್ಟೇಗೌಡ (28) ಆಕೆ ನಿರಾಕರಿಸಿದಾಗ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೆಂಗೇರಿ ಠಾಣಾ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಚನ್ನಪಟ್ಟಣ ಮೂಲದ ಪುಟ್ಟೇಗೌಡರಿಗೆ ಕೇವಲ ಆರು ತಿಂಗಳ ಹಿಂದೆಯಷ್ಟೇ ವಿವಾಹಿತ ಮಹಿಳೆಯೊಬ್ಬಳ ಪರಿಚಯವಾಗಿತ್ತು. ತಮ್ಮ ಪಕ್ಕದ ಊರಿನವರೇ ಆಗಿದ್ದ ಮಹಿಳೆಯೊಂದಿಗೆ ಸ್ನೇಹ ಸಂಬಂಧವಿತ್ತು. ಇತ್ತೀಚೆಗೆ ಆಕೆಯನ್ನು ತನ್ನ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಒತ್ತಾಯಿಸುತ್ತಿದ್ದರಂತೆ. ಇಬ್ಬರು ಮಕ್ಕಳಿರುವ ತಾನು ನಿನ್ನ ಜೊತೆಯಲ್ಲಿದ್ದು ಮುಂದುವರೆಯಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದರಂತೆ.

ಜನವರಿ 30 ರಂದು ಕೆಲಸಕ್ಕೆಂದು ಬಂದಿದ್ದ ಪುಟ್ಟೇಗೌಡ ನೇರವಾಗಿ ಲಾಡ್ಜ್​ಗೆ ಬಂದು ಅದೇ ಮಹಿಳೆಯನ್ನು ಕರೆಸಿಕೊಂಡು ಲೈಂಗಿಕ ಸಂಪರ್ಕ ಹೊಂದಿದ್ದರು. ಒಂದು ಗಂಟೆಗಳ ಕಾಲ ಜೊತೆಯಲ್ಲೇ ಕಳೆದ ಬಳಿಕ ಮತ್ತೆ ಜೊತೆಯಲ್ಲೇ ಇರುವಂತೆ ಆಕೆಯೊಂದಿಗೆ ಕ್ಯಾತೆ ತೆಗೆದಿದ್ದಾರೆ. ಇತ್ತ ಆಕೆ ನಿದ್ರೆಗೆ ಜಾರಿದಾಗ ಬಾತ್ ರೂಮಿಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಚ್ಚರವಾದ ಬಳಿಕ ಗಮನಿಸಿದ ಮಹಿಳೆ ಭಯದಿಂದ ಹೆದರಿ ರೂಮ್ ಲಾಕ್ ಮಾಡಿಕೊಂಡು ತೆರಳಿದ್ದರು. ಲಾಡ್ಜ್ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪುಟ್ಟೇಗೌಡ ಆತ್ಮಹತ್ಯೆಗೆ ಶರಣಾಗಿರುವುದು ಬಯಲಾಗಿದೆ ಎಂದು ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ: ಜಜ್ಜಿದ ಮೊಬೈಲ್ ಮೂಲಕ ಗುರುತು ಪತ್ತೆ

ABOUT THE AUTHOR

...view details