ಕರ್ನಾಟಕ

karnataka

ETV Bharat / state

ಪತ್ನಿಯನ್ನೇ ವೇಶ್ಯೆಯೆಂದು ಬಿಂಬಿಸಿದ ಆರೋಪ: ಪತಿ ವಿರುದ್ಧ ದಾಖಲಾಯ್ತು FIR - ಪತ್ನಿಯನ್ನು ವೇಶ್ಯೆ ಎಂದು ಬಿಂಬಿಸಿದ ಪತಿ

ಟೆಕ್ಕಿ ಪತ್ನಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಎಸ್ಕಾರ್ಟ್ ಸರ್ವೀಸ್​ ಎಂದು ಹೆಂಡತಿ ಮೊಬೈಲ್ ನಂಬರ್ ಹಾಕಿ ವಿಕೃತಿ ಮೆರೆದ ಪತಿಯ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಪುಲಕೇಶಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

FIR
FIR

By

Published : Jul 1, 2021, 10:57 AM IST

ಬೆಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿಯನ್ನೇ ವೇಶ್ಯೆ ಎಂದು ಬಿಂಬಿಸಿ ವಿಕೃತಿ ಮೆರೆದಿರುವ ಪತಿ ವಿರುದ್ಧ ಪತ್ನಿ ಪುಲಕೇಶಿ ನಗರದಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟೆಕ್ಕಿ ಪತ್ನಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಎಸ್ಕಾರ್ಟ್ ಸರ್ವೀಸ್​ ಎಂದು ಹೆಂಡತಿಯ ಮೊಬೈಲ್ ನಂಬರ್ ಹಾಕಿ ವಿಕೃತಿ ಮೆರೆದ ಪತಿಯ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಪುಲಕೇಶಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇಂದಿರಾನಗರದ ನಿವಾಸಿ 25 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಪತಿ ಜಯಶಂಕರ್ ಕುಮಾರ್ ಸಿಂಗ್ (29) ವಿರುದ್ಧ ಪ್ರಕರಣ ದಾಖಲಾಗಿದೆ.

ಜಯಶಂಕರ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದೂರುದಾರ ಮಹಿಳೆಯನ್ನು 2019 ರಲ್ಲಿ ವಿವಾಹವಾಗಿದ್ದ. ಮನೆಯ ಖರ್ಚು ವೆಚ್ಚಗಳನ್ನೆಲ್ಲಾ ಆಕೆಯೇ ಭರಿಸುತ್ತಿದ್ದಳಂತೆ. ಈ ಮಧ್ಯೆ ನೀತು ಯಾರೊಂದಿಗೂ ಮಾತನಾಡಬಾರದು ಎಂದು ತಾಕೀತು ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.


ಈ ಬಗ್ಗೆ ಪ್ರಶ್ನಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕಿರುಕುಳ ತಾಳದೇ 2020ರ ನವೆಂಬರ್‌ನಲ್ಲಿ ಪತಿಯ ಮನೆ ತೊರೆದ ಟೆಕ್ಕಿ ಪಿಜಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಮನೆ ಬಿಟ್ಟು ಬಂದರೂ ಸುಮ್ಮನಾಗದ ಪತಿ ವಿವಿಧ ನಂಬರ್‌ಗಳಿಂದ ಅಶ್ಲೀಲ ಸಂದೇಶ ಕಳುಹಿಸಿ ತೊಂದರೆ ಕೊಡುತ್ತಿದ್ದ.

ಸಾವಿರಕ್ಕೂ ಹೆಚ್ಚಿನ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಕೆಟ್ಟದಾಗಿ ಕಮೆಂಟ್ ಮಾಡಿದ್ದ. ಪತ್ನಿಯ ಹೆಸರಿನಲ್ಲಿ ಸುಳ್ಳು ಖಾತೆ ಸೃಷ್ಟಿಸಿ ಆಕೆಯ ಮೊಬೈಲ್ ನಂಬರ್‌ ಅನ್ನು ನಮೂದಿಸಿ ಎಸ್ಕಾರ್ಟ್ ಸರ್ವೀಸ್ ಎಂಬುದಾಗಿ ಲೇಬಲ್ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.


ಇತ್ತೀಚೆಗೆ ದೂರುದಾರ ಮಹಿಳೆಯ ಮೊಬೈಲ್ ನಂಬರ್‌ಗೆ ಹಲವು ಜನರಿಂದ ಕೆಟ್ಟ ಸಂದೇಶ ಹಾಗೂ ಕರೆಗಳು ಬರಲು ಪ್ರಾರಂಭವಾಗಿವೆ. ಏಕಾಏಕಿ ಕೆಟ್ಟ ಸಂಭಾಷಣೆಯ ಕರೆಗಳು ಬರುತ್ತಿರುವುದನ್ನು ಕಂಡು ಆತಂಕಗೊಂಡ ಟೆಕ್ಕಿ ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗ ಪತಿಯ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ:One Sided Love: ಯುವತಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ನೇಣಿಗೆ ಶರಣಾದ ಪ್ರೇಮಿ

ಹಳೆ ಚಾಳಿ ಮುಂದುವರೆಸಿದ ಪತಿ:
ಕಳೆದ ಜನವರಿಯಲ್ಲಿ ಪತಿಯ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪೊಲೀಸರು ತಿಳಿವಳಿಕೆ ಹೇಳಿದ ಹಿನ್ನೆಲೆ ಮುಂದೆ ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದ. ಇದೀಗ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾನೆ ಎನ್ನಲಾಗುತ್ತಿದೆ. ಈ ಕೃತ್ಯಗಳಿಗೆ ಆತನ ಕುಟುಂಬಸ್ಥರೂ ಸಹಕಾರ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ

ABOUT THE AUTHOR

...view details