ಕರ್ನಾಟಕ

karnataka

ETV Bharat / state

24 ಗಂಟೆಗಳಲ್ಲಿ ಬೆಂಗಳೂರಿಗೆ ಬರ್ತೀನಿ ಅಂದಿದ್ದ ಮನ್ಸೂರ್​​​​​​​​ 48 ಗಂಟೆ ಆದ್ರೂ ಪತ್ತೆ ಇಲ್ಲ! - undefined

ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ವಿಡಿಯೋ ಮಾಡಿ 24 ಗಂಟೆಯ ಒಳಗಡೆ ಬೆಂಗಳೂರಿಗೆ ಬರ್ತೀನಿ ಎಂದು ಹೇಳಿದ್ದ. ಆದರೆ 48 ಗಂಟೆ ಕಳೆದರೂ ಇನ್ನೂ ಪೊಲೀಸರ ಎದುರು ಹಾಜರಾಗಿಲ್ಲ.

Mansoor Khan

By

Published : Jul 17, 2019, 4:12 PM IST

ಬೆಂಗಳೂರು:ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ‌ಯೂಟೂಬ್​ನಲ್ಲಿ ಕಣ್ಣೀರಿಟ್ಟು ವಿಡಿಯೋ ಮಾಡಿ 24 ಗಂಟೆಯ ಒಳಗಡೆ ಬೆಂಗಳೂರಿಗೆ ಬರ್ತೀನಿ ಎಂದು ಹೇಳಿದ್ದ. ಆದರೆ 48 ಗಂಟೆ ಕಳೆದರೂ ಇನ್ನೂ ಪೊಲೀಸರ ಎದುರು ಹಾಜರಾಗಿಲ್ಲ.

ಐಎಂಎ ಗ್ರೂಪ್​ ಎಂಬ ಯೂಟೂಬ್​ ಚಾನೆಲ್​ನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿರುವ ಮನ್ಸೂರ್ ಖಾನ್, ಹೂಡಿಕೆದಾರರ ಹಣ ವಾಪಸ್ ಕೊಡ್ತೀನಿ. ನನಗೆ ಮೋಸ ಮಾಡಿದವರ ಹೆಸರು ಹೇಳ್ತೀನಿ. ನಾನು ಬಂದಾಗ ಪೊಲೀಸರು ರಕ್ಷಣೆ ಕೊಡಿ ಎಂದು ಬೇಡಿಕೊಂಡಿದ್ದ.

ಆದರೆ ಮನ್ಸೂರ್ ಮಾತನ್ನ ಎಸ್​ಐಟಿ ಅಧಿಕಾರಿಗಳು ನಂಬಿರಲಿಲ್ಲ. ಮನ್ಸೂರ್ ನಾಟಕವಾಡುತ್ತಿದ್ದಾನೆ ಎಂಬುದು ಅಧಿಕಾರಿಗಳಿಗೆ ಗೊತ್ತಿತ್ತು. ಈಗಾಗಲೇ ಈತನ ಮೇಲೆ ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್​ ಜಾರಿಯಾಗಿದೆ. ಮನ್ಸೂರ್ ಪಾಸ್​​ಪೋರ್ಟ್ ಕೂಡ ಸೀಜ್ ಆಗಿದ್ದು, ಮನ್ಸೂರ್ ಬೆಂಗಳೂರಿಗೆ ಬರಬೇಕಾದರೆ ಎಸ್​ಐಟಿ ಸಹಾಯ ಅವಶ್ಯವಿದೆ. ಈ ಎಲ್ಲಾ ವಿಷಯಗಳು ಗೊತ್ತಿದ್ರು ಹೂಡಿಕೆದಾರರನ್ನ ನಂಬಿಸುವ ನಾಟಕ ಆಡ್ತಿದ್ದಾನೆ ‌ಎಂದು ಪೊಲೀಸ್ ಮೂಲಗಳು ತಿಳಿಸಿವೆ.

For All Latest Updates

TAGGED:

ABOUT THE AUTHOR

...view details