ಕರ್ನಾಟಕ

karnataka

ಕೊರೊನಾ ತಡೆಗೆ ವಿಪ್ರೋದ ಅಜೀಂ ಪ್ರೇಮ್​ಜಿ ಪ್ರತಿಷ್ಠಾನದಿಂದ ₹1125 ಕೋಟಿ ದೇಣಿಗೆ..

By

Published : Apr 1, 2020, 6:39 PM IST

ಈಗಾಗಲೇ ಪ್ರತಿಷ್ಠಾನದಲ್ಲಿ 1600 ಜನರ ತಂಡವಿದೆ. ದೇಶದ ಹಲವು ಸಂಘ-ಸಂಸ್ಥೆಗಳ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿವೆ.

ಅಜಿಂ ಪ್ರೇಮ್​ಜಿ   ಪ್ರತಿಷ್ಠಾನದಿಂದ ₹ 1125 ಕೋಟಿ ಬದ್ಧತೆ ಹಣ
ಅಜಿಂ ಪ್ರೇಮ್​ಜಿ ಪ್ರತಿಷ್ಠಾನದಿಂದ ₹ 1125 ಕೋಟಿ ಬದ್ಧತೆ ಹಣ

ಬೆಂಗಳೂರು :ಕೊರೊನಾ ವಿರುದ್ಧದಸಮರಕ್ಕೆವಿಪ್ರೋ ಸಮೂಹ ಸಂಸ್ಥೆ ಹಾಗೂ ಅಜೀಂ ಪ್ರೇಮ್​ಜಿ ಪ್ರತಿಷ್ಠಾನ ಸೇರಿ 1125 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಕೋವಿಡ್-19ರ ಕಡಿವಾಣಕ್ಕೆ ಬದ್ಧತೆ ಹಣವನ್ನಾಗಿ ಇದನ್ನಿರಿಸಲಾಗಿದೆ.

ಈ ಬದ್ಧತೆ ಹಣವನ್ನ ಪ್ರತ್ಯೇಕ ವೈದ್ಯಕೀಯ ಸೇವೆಗಳನ್ನು ಕಲ್ಪಿಸೋದಕ್ಕೆ ಉಪಯೋಗಿಸಿಕೊಳ್ಳಬಹುದಾಗಿದೆ. ವಿಪ್ರೋ ನಿಯಮಿತ್ತ- 25 ಕೋಟಿ, ವಿಪ್ರೋ ಉದ್ಯಮಗಳು-100 ಕೋಟಿ ಹಾಗೂ ಅಜಿಂ ಪ್ರೇಮ್​ಜಿ ಪ್ರತಿಷ್ಠಾನ 1000 ಕೋಟಿಯನ್ನು ಕೊರೊನಾ ವಿರುದ್ಧದ ಯುದ್ಧಕ್ಕೆ ನೀಡುತ್ತಿವೆ.

ಈಗಾಗಲೇ ಪ್ರತಿಷ್ಠಾನದಲ್ಲಿ 1600 ಜನರ ತಂಡವಿದೆ. ದೇಶದ ಹಲವು ಸಂಘ-ಸಂಸ್ಥೆಗಳ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿವೆ.

ABOUT THE AUTHOR

...view details