ಕರ್ನಾಟಕ

karnataka

ETV Bharat / state

ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ: ರಾಜ್ಯದ ಜನತೆಗೆ ಮೋದಿ ಮನವಿ - ರಾಜ್ಯದ ಜನತೆಗೆ ಮೋದಿ ಮನವಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂವಾದದ ವರ್ಚುಯಲ್​ ಸಭೆಯಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿ, ಕಾರ್ಯಕರ್ತರಿಗೆ ಸಲಹೆ ಸೂಚನೆ ನೀಡಿದರು.

win-bjp-with-record-maximum-seats-modi-appeals
ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ: ರಾಜ್ಯದ ಜನತೆಗೆ ಮೋದಿ ಮನವಿ

By

Published : Apr 27, 2023, 4:16 PM IST

ಬೆಂಗಳೂರು:ಬಿಜೆಪಿ ಕಾರ್ಯಕರ್ತರಾಗುವ ದ್ವಿಗುಣ ಗೌರವ. ಜವಾಬ್ದಾರಿಯೂ ಹೆಚ್ಚಾಗಿದೆ. ಬಸವಣ್ಣನವರ ನಾಡು ನಿಮ್ಮದು. ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಮನವಿ ಮಾಡಿದರು. ಲೈವ್ ವರ್ಚುಯಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಬೂತ್ ಗೆಲುವು ರಾಜ್ಯದ ಗೆಲುವಿಗೆ ಪೂರಕ. ಮತ್ತೆ 2 ದಿನಗಳಲ್ಲಿ ಕರ್ನಾಟಕದ ಜನರ ದರ್ಶನಕ್ಕಾಗಿ, ಆಶೀರ್ವಾದ ಪಡೆಯಲು ಬರಲಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಲೈವ್ ವರ್ಚುವಲ್ ಸಭೆಯನ್ನು ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಕ್ಷೀಸಿದರು.

ಹೆಚ್ಚು ಮತದಿಂದ ಗೆಲುವಿಗೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯನ್ನು ವಿಭಿನ್ನ ಪಕ್ಷವಾಗಿ ಗೆಲ್ಲಿಸಿ. ಬೂತ್‍ಗಳಲ್ಲಿ 10 ಮಹಿಳಾ, 10 ಪುರುಷ ಕಾರ್ಯಕರ್ತರನ್ನು ಜೊತೆಗೂಡಿಸಿ. ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಿ. ಹಿರಿಯರಿಗೆ ಗೌರವ ಸಲ್ಲಿಸಿ. ಕಿರಿಯರನ್ನು ಪ್ರೀತಿಯಿಂದ ಮಾತನಾಡಿಸಿ. ಬೂತ್ ಗೆಲುವು ಎಂದರೆ ಕುಟುಂಬಗಳ ಜೊತೆ ಮಾತುಕತೆ ಮತ್ತು ಜನರ ಒಲವಿನ ಗೆಲುವಾಗಲಿ ಎಂದು ಆಶಿಸಿದರು.

25 ವರ್ಷಗಳಲ್ಲಿ ಬಡತನಮುಕ್ತ, ವಿಕಸಿತ ದೇಶ ನಮ್ಮ ಗುರಿ. ಕೇವಲ ಅಧಿಕಾರ ಪಡೆಯುವುದಷ್ಟೇ ನಮ್ಮ ವಿರೋಧಿಗಳ ಗುರಿ. ಕರ್ನಾಟಕದಲ್ಲಿ ಬೆಂಗಳೂರಿನಂಥ ಅನೇಕ ಸ್ಟಾರ್ಟಪ್ ಹಬ್‍ಗಳ ನಿರ್ಮಾಣ ಆಗಲಿ. ಪೂರ್ಣ ಬಹುಮತದ ಸ್ಥಿರ ಸರಕಾರಕ್ಕಾಗಿ ಮತ ಕೇಳಬೇಕು. ದೆಹಲಿಯಲ್ಲಿ 9 ವರ್ಷಗಳಿಂದ ಸ್ಥಿರ ಸರಕಾರದಿಂದ ಆದ ಲಾಭ ಮತ್ತು ಅಸ್ಥಿರ ಸರಕಾರದ ವೈಫಲ್ಯಗಳನ್ನು ಅನಾವರಣಗೊಳಿಸಿ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್‍ ಅಡಿ ಪ್ರತಿ ಅರ್ಹ ರೈತರಿಗೆ ಒಟ್ಟು 10 ಸಾವಿರ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಗರಿಷ್ಠ ಲಾಭ ಲಭಿಸಿದೆ. ವಿಕಾಸದ ವೇಗ ವರ್ಧನೆಗೆ ಬಿಜೆಪಿ ಗೆಲ್ಲಬೇಕಿದೆ. ಸ್ವಾಸ್ಥ್ಯ ಸೇವೆಯಲ್ಲಿ ಯುಪಿಎ ಸರಕಾರದ ನಿಧಾನಗತಿಯಿಂದ ಜನರಿಗೆ ಸಮಸ್ಯೆ ಆಗಿತ್ತು. ಏಮ್ಸ್ ಸಂಖ್ಯೆ ಗಮನಾರ್ಹ ಹೆಚ್ಚಳ (20ಕ್ಕೆ ಏರಿಕೆ), ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ 600ಕ್ಕೆ ಏರಿದೆ. ಭ್ರಷ್ಟಾಚಾರ ದೂರವಿಡಲು ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ. 2014ರ ಬಳಿಕ ಭ್ರಷ್ಟಾಚಾರ ದೂರವಿಡಲು ಜನ್‍ಧನ್, ಆಧಾರ್ ಮೂಲಕ ಡಿಬಿಟಿಯಡಿ ಹಣ ವರ್ಗಾವಣೆ ಆಗುತ್ತಿದೆ. ಭ್ರಷ್ಟಾಚಾರ ತಪ್ಪಿಸಿದ್ದೇವೆ ಎಂದು ವಿವರಿಸಿದರು.

ಕೆಲವು ಪಕ್ಷಗಳು ರಾಜಕೀಯವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿದ್ದವು. ಅವರಿಗೆ ಯುವಜನರ ಚಿಂತೆ ಇಲ್ಲ. ಸರಕಾರವು ವರ್ತಮಾನದ ಜೊತೆ ಭವಿಷ್ಯದ ಕುರಿತು ಚಿಂತಿಸಬೇಕು. ಸಂಪತ್ತಿನ ವೃದ್ಧಿ, ಜನಕಲ್ಯಾಣದ ಕುರಿತು ಯೋಚಿಸಬೇಕು. ಬಿಜೆಪಿ ಶಾರ್ಟ್​ಕಟ್ ಬದಲಾಗಿ ವಿಕಸಿತ ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಕೋವಿಡ್ ವ್ಯಾಕ್ಸಿನ್ ಉಚಿತವಾಗಿ ಕೊಟ್ಟಿದ್ದೇವೆ. ಜನರು ಹಸಿವಿನಿಂದ ಬಳಲಬಾರದೆಂದು ಉಚಿತ ಪಡಿತರ ಕೊಡಲಾಯಿತು. ಮೂಲಸೌಕರ್ಯಗಳ ಹೆಚ್ಚಳ, ಐಐಟಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ಕೊಡಲಾಗಿದೆ. ಹಿಂದಿನ ಆಡಳಿತಗಾರರು ದೂರದೃಷ್ಟಿ ಹೊಂದಿರಲಿಲ್ಲ. ಉಚಿತ ಕುರಿತ ಆಶ್ವಾಸನೆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವವರನ್ನು ದೂರವಿಡಿ ಎಂದು ವಿನಂತಿಸಿದರು.

ಕಾಂಗ್ರೆಸ್ ವಾರಂಟಿ ಎಕ್ಸ್​​​ಪೈರ್​​ ಆಗಿದೆ: ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸುಳ್ಳು ಆಶ್ವಾಸನೆ ನೀಡಿ ಅನುಷ್ಠಾನಕ್ಕೆ ತಾರದೆ ಇದ್ದುದನ್ನು ಜನರಿಗೆ ತಿಳಿಸಬೇಕು. ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕೀಯದ ಗ್ಯಾರಂಟಿಯನ್ನಷ್ಟೇ ನೀಡಬಲ್ಲದು. ಕಾಂಗ್ರೆಸ್ ವಾರಂಟಿ ಈಗಾಗಲೇ ಎಕ್ಸ್​​​ಪೈರ್ ಆಗಿದೆ ಎಂದು ವ್ಯಂಗ್ಯವಾಗಿದರು.

ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚುನಾವಣೆ ಸಮರ ಆರಂಭವಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ. ಮಹಾಪ್ರಚಾರ ಅಭಿಯಾನದ ಮನೆಮನೆ ಭೇಟಿಯ ಮಧ್ಯೆ ಕಾರ್ಯಕರ್ತರಿಗೆ ಪ್ರೇರಣೆ ನೀಡಿ ಶಕ್ತಿವಂತರಾಗಿ ಉತ್ಸಾಹದಿಂದ ದುಡಿಯಲು ಶ್ರೇಷ್ಠ ಜನನಾಯಕ ಮೋದಿ ಅವರು ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ. 15 ಬಾರಿ ಪ್ರವಾಸ ಮಾಡಿದ ಪ್ರಧಾನಿಯವರು ರಾಜಕೀಯ ಚಿತ್ರಣ ಬದಲಾಯಿಸಿದ್ದಾರೆ. ಕಾರ್ಯಕರ್ತರಲ್ಲಿ ಬಹುಮತದ ಸರಕಾರದ ವಿಶ್ವಾಸ ಲಭಿಸಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಲೈವ್ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡುತ್ತಿದ್ದನ್ನು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಸಚಿವ ಗೋವಿಂದ ಕಾರಜೋಳ ಮತ್ತಿತರರು ವೀಕ್ಷಿಸಿದರು. ಇದೇ ವೇಳೆ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿಯೂ ಮೋದಿ ವರ್ಚುವಲ್ ಸಂವಾದ ವೀಕ್ಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ:ಅಮಿತ್ ಶಾ ಪ್ರಚಾರ ನಿರ್ಬಂಧ ಕುರಿತ ದೂರು.. ಕಾಂಗ್ರೆಸ್ ಬೆಚ್ಚಿಬಿದ್ದಿರುವುದಕ್ಕೆ ನಿದರ್ಶನ : ಶೋಭಾ ಕರಂದ್ಲಾಜೆ

ABOUT THE AUTHOR

...view details