ಕರ್ನಾಟಕ

karnataka

ETV Bharat / state

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬೆಂಕಿ: ಕಡತಗಳು ಬೆಂಕಿಗಾಹುತಿ - ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇಂದು ಅಗ್ನಿ ಅವಘಡ ಸಂಭವಿದೆ. ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡ‌ ಶಂಕೆ ವ್ಯಕ್ತವಾಗಿದೆ.

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬೆಂಕಿ: ಕಡತಗಳು ಬೆಂಕಿಗಾಹುತಿ
Wilson Garden Police Station on Fire Files go up in flames

By

Published : Oct 18, 2022, 12:26 PM IST

ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇಂದು ಅಗ್ನಿ ಅವಘಡ ಸಂಭವಿದೆ. ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡ‌ ಶಂಕೆ ವ್ಯಕ್ತವಾಗಿದ್ದು, ಸ್ಯಾನಿಟೈಸರ್ ಮತ್ತು ಕೆಮಿಕಲ್ ಇದ್ದ ಕೊಠಡಿಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಠಾಣೆಗೆ ಬೆಂಕಿ ಆವರಿಸಿದ್ದು, ಬೆಂಕಿಯಲ್ಲಿ ಕೆಲ ಹಳೆ ಕಡತ ಹಾಗೂ ಜಪ್ತಿ ಮಾಡಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬೆಂಕಿ: ಕಡತಗಳು ಬೆಂಕಿಗಾಹುತಿ
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬೆಂಕಿ: ಕಡತಗಳು ಬೆಂಕಿಗಾಹುತಿ

ಬೆಂಕಿ ವ್ಯಾಪಿಸುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಹಳೆಯ ಕಡತಗಳ ಜೊತೆಗೆ ಪೀಠೋಪಕರಣ, ಕಂಪ್ಯೂಟರ್​ಗಳು ನಾಶವಾಗಿವೆ. ಸದ್ಯ ಘಟನೆಯ ಕುರಿತು ವರದಿ ನೀಡುವಂತೆ ಹಲಸೂರು ಗೇಟ್ ಎಸಿಪಿಗೆ ಸೂಚಿಸಿರುವುದಾಗಿ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ABOUT THE AUTHOR

...view details