ಕರ್ನಾಟಕ

karnataka

ETV Bharat / state

ನಾಳೆ ನಗರದ 8 ಕಡೆ ನಡೆಯಲಿದೆ ಕೋವಿಡ್ ವ್ಯಾಕ್ಸಿನ್ ಡ್ರೈ ರನ್: ಎಲ್ಲೆಲ್ಲಿ? - covid latest news

8 ಕಡೆಗಳಲ್ಲಿ ನಾಳೆ ಡ್ರೈ ರನ್ ನಡೆಯಲಿದೆ. ಈ ಬಾರಿ ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೂ ಡ್ರೈ ರನ್ ನಡೆಸಲಾಗ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಮಾಹಿತಿ ನೀಡಿದ್ದಾರೆ.

will be conduct the covid Vaccine Dry Run in eight place of Banglore
ನಗರದ ಎಂಟು ಕಡೆ ನಡೆಯಲಿದೆ ಕೋವಿಡ್ ವ್ಯಾಕ್ಸಿನ್ ಡ್ರೈ ರನ್

By

Published : Jan 7, 2021, 3:34 PM IST

Updated : Jan 7, 2021, 4:23 PM IST

ಬೆಂಗಳೂರು: ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ತಾಲೀಮು ನಗರದ ಎಂಟು ವಲಯಗಳ ಎಂಟು ಆಸ್ಪತ್ರೆಗಳಲ್ಲಿ ನಡೆಯಲಿದೆ.

ಸರ್ಕಾರದ ಆರೋಗ್ಯ ಇಲಾಖೆಯ ಜೊತೆ ವೀಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ, 8 ಕಡೆಗಳಲ್ಲಿ ನಾಳೆ ಡ್ರೈ ರನ್ ನಡೆಯಲಿದೆ. ಪಿಹೆಚ್‌ಸಿ, ರೆಫೆರಲ್, ಸಿಹೆಚ್‌ಸಿಯಲ್ಲಿ ಆಸ್ಪತ್ರೆಯಲ್ಲಿ ನಡೆಯಲಿದೆ. ಈ ಬಾರಿ ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೂ ಡ್ರೈ ರನ್ ನಡೆಸಲಾಗ್ತಿದೆ ಎಂದರು.

ಕಳೆದ ಬಾರಿ ಆಗಿದ್ದ ಟೆಕ್ನಿಕಲ್ ಸಮಸ್ಯೆಗಳನ್ನು ಈ ಬಾರಿ ಪರಿಹರಿಸಲಾಗಿದೆ. ಆಧಾರ್ ಕಾರ್ಡ್ ಲಿಂಕ್ ಆಗುವುದು ಸಮಸ್ಯೆ ಆಗುತ್ತಿರುವ ಹಿನ್ನೆಲೆ, ಬೇರೆ ಐಡಿ ಕಾರ್ಡ್ ಗಳನ್ನು ಬಳಸಲು ತಿಳಿಸಲಾಗಿದೆ. ಒಂದು ಲಸಿಕಾ ಸ್ಥಳದಲ್ಲಿ 25 ಜನರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ನಾಳೆ ನಗರದ 8 ಕಡೆ ನಡೆಯಲಿದೆ ಕೋವಿಡ್ ವ್ಯಾಕ್ಸಿನ್ ಡ್ರೈ ರನ್

ನಾಳೆ ಡ್ರೈ ರನ್ ನಡೆಯಲಿರೋ ಸ್ಥಳ:

  • ಬೊಮ್ಮನಹಳ್ಳಿ ವಲಯ - ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ
  • ದಾಸರಹಳ್ಳಿ ವಲಯ - ಸಪ್ತಗಿರಿ ಮೆಡಿಕಲ್ ಕಾಲೇಜು
  • ಈಸ್ಟ್ ವಲಯ - ಹಲಸೂರು ರೆಫೆರಲ್ ಆಸ್ಪತ್ರೆ
  • ಮಹದೇವಪುರ ವಲಯ - ಕೆ.ಆರ್.ಪುರಂ ಜನರಲ್ ಆಸ್ಪತ್ರೆ
  • ಆರ್.ಆರ್.ನಗರ - ಕೆಂಗೇರಿ ಪಿಹೆಚ್‌ಸಿ
  • ಸೌಥ್ ವಲಯ - ಕಿಮ್ಸ್ ಆಸ್ಪತ್ರೆ
  • ವೆಸ್ಟ್ ವಲಯ - ಬಿಎಂಸಿ
  • ಯಲಹಂಕ ವಲಯ - ಆಸ್ಟ್ರೋ ಸಿಎಂಐ ಆಸ್ಪತ್ರೆ
Last Updated : Jan 7, 2021, 4:23 PM IST

ABOUT THE AUTHOR

...view details