ಬೆಂಗಳೂರು: ಮಾನಸಿಕ ಕಿರುಕುಳ ತಾಳಲಾರದೆ ತಂಗಿಯೊಂದಿಗೆ ಸೇರಿ ಗಂಡನನ್ನು ಹತ್ಯೆಗೈದು ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿ ಶೌಚಗುಂಡಿಯಲ್ಲಿ ಬಿಸಾಕಿದ್ದ ಆರೋಪದಡಿ ಪತ್ನಿ ಹಾಗೂ ಸಹೋದರಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿಯ ಕೋಗಿಲು ರಸ್ತೆಯ 3ನೇ ಕ್ರಾಸ್ ನಿವಾಸಿಯಾಗಿದ್ದ ಬಿಹಾರ ಮೂಲದ ಶಕೀಲ್ ಅಕ್ತರ್ ಸೈಪಿ (28) ಎಂಬಾತನನ್ನು ಕೊಲೆಗೈದ ಆರೋಪದಡಿ ಪತ್ನಿ ನಾಜೀರಾ, ಸಹೋದರಿ ಕಶ್ಮೀರಿ ಎಂಬವರನ್ನು ಬಂಧಿಸಲಾಗಿದೆ.
ಸಂಪೂರ್ಣ ವಿವರ: ನಗರದಲ್ಲಿ ಕಳೆದ 10 ವರ್ಷಗಳಿಂದ ವಾಸವಾಗಿದ್ದ ಶಕೀಲ್, ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಪತ್ನಿ ನಾಜೀರಾಳನ್ನು ಬಿಹಾರದಿಂದ ಕೆಲ ತಿಂಗಳ ಹಿಂದೆ ಕರೆಯಿಸಿಕೊಂಡಿದ್ದ. ಗಂಡ-ಹೆಂಡತಿ ಹಾಗೂ ಆರೋಪಿತೆ ಕಶ್ಮೀರಿ ಎಂಬಾಕೆ ಒಂದೇ ಕಡೆ ವಾಸ ಮಾಡುತ್ತಿದ್ದರು. ಆದರೆ, ಅ.14ರಂದು ಕೋಗಿಲು ಬಳಿಯ ಖಾಲಿ ನಿವೇಶನದ ಬಳಿಯ ಶೌಚಗುಂಡಿ ಬಳಿ ಬೆಡ್ ಶೀಟ್ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:ಪ್ರಿಯಕರನೊಂದಿಗೆ ಸೇರಿ ಅತ್ತೆಯ ಹತ್ಯೆ, ಮೊಬೈಲ್ ಚಾಟಿಂಗ್ನಿಂದ ಸಂಚು ಬಯಲು: ಸೊಸೆ ಸಹಿತ ಮೂವರ ಬಂಧನ