ಬೆಂಗಳೂರು: ಶೀಲ ಶಂಕಿಸಿ ಬೆಲ್ಟ್ನಿಂದ ಪತ್ನಿ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪದಡಿ ಆಕೆಯ ಪತಿಯನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ನಿವಾಸಿಯಾಗಿರುವ ನೀಲಕಂಠ ಬಂಧಿತ ಆರೋಪಿ. ನೀಲಕಂಠ ಹಾಗೂ ಮೃತ ನಾಗಮ್ಮ ದಂಪತಿಯು ಹೆಚ್ಎಎಲ್ ಕಾಳಪ್ಪ ಲೇಔಟ್ನಲ್ಲಿ ವಾಸವಾಗಿದ್ದರು. 17 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಎಂಟು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕ್ಯಾಬ್ ಚಾಲಕನಾಗಿ ನೀಲಕಂಠ ಕೆಲಸ ಮಾಡುತ್ತಿದ್ದರು. ಇತ್ತ ಹೆಂಡತಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.