ಬೆಂಗಳೂರು:ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನ ಮತ್ತು ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಎಎಸ್ ಅಧಿಕಾರಿ ಜಿಟಿ.ದಿನೇಶ್ ಕುಮಾರ್ ಹಾಗೂ ಅತ್ತಿಗೆ ರಮ್ಯಾ ಎಂಬುವವರ ವಿರುದ್ದ ಪತ್ನಿ ಕೆಪಿ. ದೀಪ್ತಿ ದೂರು ದಾಖಲು ಮಾಡಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಎಎಸ್ ಅಧಿಕಾರಿ ಜಿಟಿ.ದಿನೇಶ್ ಕುಮಾರ್ ಓದಿ: ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಕೋರಮಂಗಲದ ವಾಣಿಜ್ಯ ಕಚೇರಿ ಅಧಿಕಾರಿ!
ಮೂಲತಃ ಚಿತ್ರದುರ್ಗದ ಸಂತೆಬೆನ್ನೂರಿನ ದೀಪ್ತಿ ಆರ್.ಆರ್.ನಗರದಲ್ಲಿ ವಾಸವಾಗಿದ್ದು, 2015ರಲ್ಲಿ ಹಿಂದೂ ಸಂಪ್ರದಾಯದಂತೆ ದಿನೇಶ್ ಕುಮಾರ್ ನೊಂದಿಗೆ ಪೋಷಕರು ಮದುವೆ ಮಾಡಿಕೊಟ್ಟರು. ವರದಕ್ಷಿಣೆ ರೂಪವಾಗಿ 1 ಕೆಜಿ ಚಿನ್ನ, ಐದು ಕೆಜಿ ಬೆಳ್ಳಿ ನೀಡಿ ಅದ್ಧೂರಿಯಾಗಿ ಮೈಸೂರಿನಲ್ಲಿ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಮುದ್ದಾದ ಹೆಣ್ಣು ಮಗುವಿದೆ.
ಆರಂಭದ ಕೆಲ ವರ್ಷಗಳ ಕಾಲ ಇಬ್ಬರು ಅನೋನ್ಯವಾಗಿದ್ದರು. ನಂತರದಲ್ಲಿ ದಿನೇಶ್ ಕುಮಾರ್ ಮನೆಗೆ ಏನು ತಂದು ಕೊಡುತ್ತಿರಲಿಲ್ಲ. ಮಕ್ಕಳಿಗೂ ಏನನ್ನು ಕೊಡಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದರು. ಇದನ್ನು ಪ್ರಶ್ನಿಸಿದರೆ ಮನೆಯಿಂದ ಚಿನ್ನಾಭರಣ ತಂದುಕೊಡುವಂತೆ ಗಂಡ ಮಾನಸಿಕ ಹಾಗೂ ದೈಹಿಕವಾಗಿ ನಿಂದಿಸುತ್ತಿದ್ದನಂತೆ.ಇದಕ್ಕೆ ದಿನೇಶ್ ಕುಮಾರ್ನ ಅತ್ತಿಗೆ ರಮ್ಯಾ ಸಾಥ್ ನೀಡಿದ್ದಳು. ಕಿರುಕುಳದ ಬಗ್ಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಿದ್ದರು. ಸಂಧಾನವಾಗಿ ಕೆಲ ದಿನಗಳ ಬಳಿಕ ಮತ್ತೆ ವರದಕ್ಷಿಣೆ ತರುವಂತೆ ಗಂಡ ಪೀಡಿಸುತ್ತಿದ್ದನಂತೆ. ಇದೀಗ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ದಿನೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.