ಕರ್ನಾಟಕ

karnataka

ETV Bharat / state

ಮಾನಸಿಕ ಖಿನ್ನತೆಯಿಂದ ಮಹಿಳಾ ಟೆಕ್ಕಿ ಆತ್ಮಹತ್ಯೆ - ಸಾಫ್ಟ್​ವೇರ್ ಇಂಜಿನಿಯರ್

ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Etv Bharat
ಪತಿ ಊಟಕ್ಕೆ ಬರಲಿಲ್ಲ‌ ಎಂದು ನೇಣಿಗೆ ಶರಣಾದ ಪತ್ನಿ.!

By

Published : Dec 17, 2022, 6:57 AM IST

Updated : Dec 17, 2022, 3:26 PM IST

ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಮಲಾನಗರದಲ್ಲಿ ನಡೆದಿದೆ. ಸಾಫ್ಟ್​ವೇರ್ ಇಂಜಿನಿಯರ್ ಸ್ವಾತಿ ಸಾವನ್ನಪ್ಪಿರುವ ಮಹಿಳೆ.

ಕ್ಷುಲ್ಲಕ ಕಾರಣಕ್ಕೆ ಮುನಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬಸ್ಥರನ್ನು ಒಪ್ಪಿಸಿ ಸ್ವಾತಿ, ಬಾಲ್ಯದ ಗೆಳೆಯ ದಾಮೋದರ್ ಮದುವೆಯಾಗಿ ಖುಷಿಯಾಗಿದ್ದರು. ಪತ್ನಿ, ಮಾವ, ಭಾವ ಸೇರಿದಂತೆ ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಊಟಕ್ಕೆ ಬರಲಿಲ್ಲವೆಂದು ಬೇಸರ: ಗುರುವಾರ ಮಧ್ಯಾಹ್ನ ಪತ್ನಿಯ ಇಷ್ಟದ ಊಟವನ್ನು ಆಕೆಯ ಆಫೀಸ್​ ಬಳಿಯೇ ಪತಿ ಆರ್ಡರ್ ಮಾಡಿ ಒಟ್ಟಿಗೆ ಊಟ ಮಾಡೋಣ ಎಂದು ಹೇಳಿದ್ದರಂತೆ. ಖಾಸಗಿ ಮೊಬೈಲ್ ಶೋ ರೂಂನಲ್ಲಿ ಪತಿ ಮ್ಯಾನೇಜರ್ ಆಗಿದ್ದು, ಕೆಲಸದ ಒತ್ತಡದಲ್ಲಿ ಪತ್ನಿ‌ ಕಚೇರಿ ತಲುಪುವುದು ತಡವಾಗಿದೆ. ಅಷ್ಟೊತ್ತಿಗಾಗಲೇ ಫುಡ್ ಪಾರ್ಸಲ್ ಪಡೆದು ಸ್ವಾತಿ ಮಧ್ಯಾಹ್ನ ಊಟ ಮಾಡಿ ಮುಗಿಸಿ, ಪತಿ ಮೇಲೆ ಮುನಿಸಿಕೊಂಡಿದ್ದರಂತೆ. ಆ ಬಳಿಕ ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಬಸವೇಶ್ವರ ನಗರ‌ ಪೊಲೀಸ್ ಠಾಣೆಯಲ್ಲಿ ‌ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು

Last Updated : Dec 17, 2022, 3:26 PM IST

ABOUT THE AUTHOR

...view details