ಕರ್ನಾಟಕ

karnataka

ETV Bharat / state

ಪತಿಯ ಅಕ್ರಮ ಸಂಬಂಧ: ಮದುವೆಯಾದ 11 ತಿಂಗಳಿಗೆ ಪತ್ನಿ ಆತ್ಮಹತ್ಯೆ - ಈಟಿವಿ ಭಾರತ ಕನ್ನಡ

ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

wife-commits-suicide-for-husbands-illicit-relationship
ಪತಿಯ ಅಕ್ರಮ ಸಂಬಂಧ : ಮದುವೆಯಾದ 11 ತಿಂಗಳಿಗೆ ಪತ್ನಿ ಆತ್ಮಹತ್ಯೆ

By

Published : Nov 23, 2022, 3:46 PM IST

ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಮದುವೆಯಾದ 11 ತಿಂಗಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ವೇತಾ(27) ಮೃತ ದುರ್ದೈವಿ. ಸದ್ಯ ಶ್ವೇತಾ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಶ್ವೇತಾರ ಪತಿ ಅಭಿಷೇಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಸೋಮವಾರಪೇಟೆ ಮೂಲದವರಾದ ಅಭಿಷೇಕ್ ಹಾಗೂ ಶ್ವೇತಾ ಸಂಬಂಧಿಗಳಾಗಿದ್ದರು. ಕೆಲಸಕ್ಕೆ ಎಂದು ಬೆಂಗಳೂರಿಗೆ ಬಂದಿದ್ದ ಅಭಿಷೇಕ್​ಗೆ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಆಕಾಂಕ್ಷಾ ಭಟ್ ಎಂಬುವಳ ಜೊತೆ ಲವ್ವಿ-ಡವ್ವಿ ಶುರುವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪಿಸಿದಾಗ ನಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ ಎಂದು ಅಭಿಷೇಕ್ ಹೇಳಿಕೊಂಡಿದ್ದ.

ಆದರೆ, ಅಭಿಷೇಕ್ ತಾಯಿ ಆಕಾಂಕ್ಷಾಳ ಕುರಿತು ಅವಳು ಉತ್ತರ ಭಾರತದವಳು, ನಮ್ಮ ಕುಟುಂಬಕ್ಕೆ ಹೊಂದಾಣಿಕೆ ಆಗಲ್ಲ. ನೀನು ಶ್ವೇತಾಳನ್ನು ಮದುವೆಯಾಗದಿದ್ದರೆ ನಾನು ಸಾಯುತ್ತೇನೆ ಎಂದು ಅಭಿಷೇಕ್​ಗೆ​ ಬೆದರಿಸಿದ್ದರು. ಹೀಗಾಗಿ ಆಕಾಂಕ್ಷಾಳನ್ನು ಮರೆತು ಶ್ವೇತಾಳನ್ನು‌ ಮದುವೆಯಾಗಲು‌ ಒಪ್ಪಿದ್ದ.

ಪತಿಯ ಅಕ್ರಮ ಸಂಬಂಧ : ಮದುವೆಯಾದ 11 ತಿಂಗಳಿಗೆ ಪತ್ನಿ ಆತ್ಮಹತ್ಯೆ

ಬಳಿಕ ಕುಟುಂಬದವರು ಸೇರಿ ಅಭಿಷೇಕ್​ ಮತ್ತು ಶ್ವೇತಾಳ ಜೋರಾಗೇ ಮದುವೆ ಮಾಡಿದ್ದರು. ಆದರೆ, ಮದುವೆ ಆದ ಮೇಲೂ ಅಭಿಷೇಕ್ ಆಕಾಂಕ್ಷಾ ಜೊತೆ ಸಂಬಂಧ ಮುಂದುವರೆಸಿದ್ದ. ಮದುವೆಯಾದ ನಂತರವೂ ಅನೇಕ ಬಾರಿ ಶ್ವೇತಾಗೆ ಸುಳ್ಳು ಹೇಳಿ ಆಕಾಂಕ್ಷಾ ಜೊತೆ ಟ್ರಿಪ್ ಕೂಡ ಹೋಗಿರುವುದಾಗಿ ಹೇಳಲಾಗಿದೆ. ಈ ವಿಷಯ ಪತ್ನಿ ಶ್ವೇತಾಗೆ ಗೊತ್ತಾಗಿ ಗಲಾಟೆ ಹಲವು ಬಾರಿ ಗಲಾಟೆ ನಡೆದಿತ್ತು.‌ ಈ ಬಗ್ಗೆ ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ಮಾಡಿದಾಗ ಅಕ್ರಮ ಸಂಬಂಧ ಬಿಡುವುದಾಗಿ ಅಭಿಷೇಕ್ ಹೇಳಿದ್ದ ಎಂದೂ ಹೇಳಲಾಗುತ್ತಿದೆ.

ಆದರೆ, ಕೆಲ ದಿನದ ನಂತರ ಮತ್ತೆ ಆಕಾಂಕ್ಷಾ ಜೊತೆ ಟ್ರಿಪ್ ಹೋದಾಗ ಅಭಿಷೇಕ್ ಮತ್ತು ಆಕಾಂಕ್ಷಾ ಜೊತೆಗೆ ಇರುವ ಫೋಟೋಗಳು ಶ್ವೇತಾಗೆ ಸಿಕ್ಕಿವೆ. ಇದರಿಂದ ಬೇಸತ್ತ ಶ್ವೇತಾ ಮೆಸೇಜ್ ಮಾಡಿ ಅಭೀಷೇಕ್ ಜೊತೆ ಜಗಳವಾಡಿದ್ದಾಳೆ. ಇದೇ ನ.10ರಂದು ಟ್ರಿಪ್​ ಮುಗಿಸಿ ಮನೆಗೆ ಬಂದ ಅಭಿಷೇಕ್​ ನನ್ನು ಮತ್ತೆ ಶ್ವೇತಾ ಪ್ರಶ್ನಿಸಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬೆಡ್ ರೂಮಲ್ಲಿ ಶ್ವೇತಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಈ ಸಂದರ್ಭ ಅಭಿಷೇಕ್ ಇದನ್ನು ತಪ್ಪಿಸಿ ಬಳಿಕ ನಿದ್ದೆಗೆ ಜಾರಿದ್ದ. ಇದೇ ಸಮಯಕ್ಕೆ‌ ಕಾದಿದ್ದ ಶ್ವೇತಾ ಬಳಿಕ ಹಾಲ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

ಇನ್ನು ವಿಷಯ ತಿಳಿದ ಶ್ವೇತಾ ಕುಟುಂಬಸ್ಥರು ಅಭಿಷೇಕ್ ನನ್ನು ಪ್ರಶ್ನೆ ಮಾಡಿದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಅಭಿಷೇಕ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಅಭಿಷೇಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ :ಪತ್ನಿ ಕೊಲೆಗೈದು ಕತ್ತರಿಸಿ ಹೊಲದಲ್ಲೆಸೆದ ಪಾಪಿ ಪತಿ!

ABOUT THE AUTHOR

...view details