ಕರ್ನಾಟಕ

karnataka

ETV Bharat / state

ಮಗುವಿನೊಟ್ಟಿಗೆ ಕಟ್ಟಡದಿಂದ ಹಾರಿ ಮಾಡೆಲ್​ ಆತ್ಮಹತ್ಯೆ: ಪತಿ ಅರೆಸ್ಟ್​​​​​​ - bangalore news today

ಬೆಂಗಳೂರಿನ ಎಲೈಟ್​ ಅಪಾರ್ಟ್​ಮೆಂಟ್​ನಲ್ಲಿ ಮಾಡೆಲ್​ ಜ್ಯೋತಿ ತನ್ನ ಮಗುವಿನೊಂದಿಗೆ ಆ. 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಪತಿ ಕಿರುಕುಳಕ್ಕೆ ನೊಂದಿರುವುದಾಗಿ ಆರೋಪಿಸಿದ್ದರು. ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪತಿ ಪಂಕಜ್​​ನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ಜ್ಯೋತಿ, ಮಗುವಿನ ಜತೆ ಪತಿ ಪಂಕಜ್​

By

Published : Aug 7, 2019, 1:24 PM IST

ಬೆಂಗಳೂರು:ಬರೋಬ್ಬರಿ 20ನೇ ಅಂತಸ್ತಿನ ಮಹಡಿಯಿಂದ 12 ವರ್ಷದ ಮಗುವಿನ ಜತೆ ತಾಯಿ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 5ರಂದು ನಗರದ ಬೆಂಗಳೂರಿನ ಎಲೈಟ್​ ಅಪಾರ್ಟ್​ಮೆಂಟ್​​​ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ಜ್ಯೋತಿ, ಮಗುವಿನ ಜತೆ ಪತಿ ಪಂಕಜ್​

ಮಾಡೆಲ್​ ಆಗಿದ್ದ ಜ್ಯೋತಿ ಹಾಗೂ ಅವರ 12 ವರ್ಷದ ಮಗು ಮೃತಪಟ್ಟಿದ್ದು, ಆತ್ಮಹತ್ಯೆಗೂ ಮುನ್ನ ಪತಿ ಪಂಕಜ್​ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋ ಆಧರಿಸಿ ಮೃತ ಮಾಡೆಲ್​ನ ಸಹೋದರ ಪ್ರಶಾಂತ್, ಪಂಕಜ್ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಸಂಬಂಧ ಪಂಕಜ್​​ನನ್ನು ಬಂಧಿಸಲಾಗಿದೆ.

ABOUT THE AUTHOR

...view details