ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬಗ್ಗೆ ಟೀಕೆ ಮಾಡಿ ನಾನೇಕೆ ಹಗುರ ಆಗಲಿ.. ಬಿ ಎಸ್ ಯಡಿಯೂರಪ್ಪ - ನಿರ್ಮಲಾನಂದ ನಾಥ ಸ್ವಾಮೀಜಿ

ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ವಿಜಯನಗರದ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ‌ ನೀಡಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

BS Yediyurappa visited Sri Adichunchanagiri Mutt
ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ‌ ನೀಡಿದ ಬಿ ಎಸ್​ ಯಡಿಯೂರಪ್ಪ

By

Published : Aug 20, 2022, 6:44 PM IST

ಬೆಂಗಳೂರು : ಸಿದ್ದರಾಮಯ್ಯ ಸ್ವಭಾವ ಏನು ಅಂತ ನಿಮಗೂ ಗೊತ್ತು. ನಾನ್ಯಾಕೆ ಅವರ ಬಗ್ಗೆ ಟೀಕೆ ಮಾಡಿ ಹಗುರ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಜಯನಗರದ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ‌ ನೀಡಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಬಳಿಕ ಮಾತನಾಡಿದ ಅವರು, ಧರ್ಮ‌ವಿಭಜನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಸಂಬಂಧ ಸಿದ್ದರಾಮಯ್ಯ ಯು ಟರ್ನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಸಿದ್ದರಾಮಯ್ಯ ಬಗ್ಗೆ ಮಾತನಾಡಲ್ಲ. ಅವರ ಸ್ವಭಾವ ಏನು ಅಂತ ಎಲ್ಲರಿಗೂ ಗೊತ್ತಿದೆ. ನಾನು ಯಾಕೆ ಅವರ ಬಗ್ಗೆ ಟೀಕೆ ಮಾಡಲಿ ಎಂದು ಪ್ರಶ್ನಿಸಿದರು.

ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ‌ ನೀಡಿದ ಬಿ ಎಸ್​ ಯಡಿಯೂರಪ್ಪ

ಅಪ್ಪಚ್ಚು ರಂಜನ್ ಬೆಂಬಲಿಗ ಮೊಟ್ಟೆ ಎಸೆದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಅದರ ಬಗ್ಗೆ ಗೊತ್ತಿಲ್ಲ ನನಗೆ. ಮೊಟ್ಟೆ ಎಸೆದವರು ಯಾರೇ ಇದ್ರು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು.

ಇದನ್ನೂ ಓದಿ :ಧರ್ಮ ವಿಭಜನೆಗೆ ಸಿದ್ದರಾಮಯ್ಯ ಪಶ್ಚಾತ್ತಾಪ...ಬಿಎಸ್ ವೈ ಸ್ವಾಗತ

ABOUT THE AUTHOR

...view details