ಕರ್ನಾಟಕ

karnataka

By

Published : Aug 9, 2020, 1:56 PM IST

ETV Bharat / state

ಎಸಿಬಿಯಿಂದ ಮಂಕಾದ ಲೋಕಾಯುಕ್ತ: ಕೊರೊನಾ ಆವರಿಸಿಕೊಂಡ ಬಳಿಕ ಇನ್ನಷ್ಟು ಮೌನ

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಎಸಿಬಿ ಸ್ಥಾಪಿಸಿದ ಬಳಿಕ ಲೋಕಾಯುಕ್ತ ಮಂಕಾಗಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಲೋಕಾಯುಕ್ತಕ್ಕೆ ಜೀವ ತುಂಬಬಹುದು ಎಂಬ ಭರವಸೆಯಿತ್ತು. ಆದರೆ, ಪ್ರಸ್ತುತ ಸರ್ಕಾರ ಕೂಡ ಲೋಕಾಯುಕ್ತ ಕಡೆಗೆ ಅಷ್ಟೊಂದು ಗಮನ ಹರಿಸಿಲ್ಲ. ಒಂದು ಸಮಯದಲ್ಲಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಸದ್ಯ ಹಲ್ಲಿಲ್ಲದ ಹಾವಿನಂತಾಗಿರುವುದಂತೂ ನಿಜ.

Why Karnataka Lokayukta is Silent
ಮೌನವಾದ ಲೋಕಾಯುಕ್ತ

ಬೆಂಗಳೂರು :ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಾದ ಬಳಿಕ ಮಂಕಾಗಿರುವ ಕರ್ನಾಟಕ ಲೋಕಾಯುಕ್ತ, ಕೊರೊನಾ ಆವರಿಸಿಕೊಂಡ ಬಳಿಕ ಇನ್ನಷ್ಟು ಸ್ಥಬ್ಧವಾಗಿದೆ. ಲೋಕಾಯುಕ್ತ ಕಚೇರಿಯಲ್ಲೂ ಕೂಡ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೆಲ ಸಿಬ್ಬಂದಿಯನ್ನು ಮಾತ್ರ ಕಚೇರಿಯ ಒಳ ಬಿಡಲಾಗುತ್ತಿದೆ.

ಲಾಕ್ ಡೌನ್ ತೆರವು ಬಳಿಕ ನಗರ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಲೋಕಾಯುಕ್ತ ಕೇಂದ್ರ ಕಚೇರಿಗೆ ಮಾತ್ರ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಲೋಕಾಯುಕ್ತ ನ್ಯಾಯಾಲಯದಲ್ಲಿ‌ ಕೂಡ ದೂರುಗಳಿಗೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆ ನಡೆಸಲು ಎರಡೂ ಕಡೆಯವರು ಒಪ್ಪಿದರೆ ಮಾತ್ರ ದಿನಾಂಕ ನಿಗದಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

ಪ್ರಸ್ತುತ ಲೋಕಾಯುಕ್ತ ಏನು ಮಾಡುತ್ತಿದೆ..?

ಸದ್ಯ, ಲೋಕಾಯುಕ್ತ ಸಾರ್ವಜನಿಕರ‌ ದೂರನ್ನು ಪತ್ರದ ಮೂಲಕ ಸ್ವೀಕರಿಸುತ್ತಿದೆ. ಆದರೆ, ಬಹುತೇಕ ‌ಪತ್ರದಲ್ಲಿ ನೊಂದವರು ಎಂದು ಮಾತ್ರ ಅಡ್ರೆಸ್ ಹಾಕಿರುತ್ತಾರೆ. ಹೀಗಾಗಿ ಇಂತಹ ಪ್ರಕರಣಗಳನ್ನು ದೂರು ಎಂದು ನಮೂದು ಮಾಡುವುದಿಲ್ಲ. ಸರಿಯಾದ‌ ಮಾಹಿತಿ ಇರದ ಕಾರಣ ‌‌ಕೆಲವೊಂದು ಪ್ರಕರಣಗಳನ್ನು ಹಾಗೆಯೇ ಬಾಕಿ ಇಡಲಾಗಿದೆ. ಸದ್ಯ, ಜನ ಜಿಲ್ಲಾ ಕಚೇರಿಗಳಲ್ಲಿ ದೂರು ನೀಡುವುದರಿಂದ ಮುಖ್ಯ ಕಚೇರಿಗೆ ಬರುವ ದೂರಿನ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಅಲ್ಲದೆ, ಲೋಕಾಯುಕ್ತಕ್ಕೆ ದಾಳಿ ‌‌ಮಾಡುವ ಅವಕಾಶ ಇಲ್ಲದ ಕಾರಣ ಜನ ಎಸಿಬಿ‌ ಮೊರೆ ಹೋಗುತ್ತಿದ್ದಾರೆ.

ಲೋಕಾಯುಕ್ತ ಮೌನವಾಗಿದ್ದೇಕೆ..?

ಭ್ರಷ್ಟಾಚಾರ ನಿಗ್ರಹದಳ (ಎಸಿಬಿ ) ಸ್ಥಾಪನೆಯಾದ ಬಳಿಕ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ನಿಯಂತ್ರಣದಡಿ ಬರುವ ದೂರುಗಳನ್ನು ತನಿಖೆ ಮಾತ್ರ ನಡೆಸುತ್ತಿವೆ. ಸದ್ಯ ದಾಳಿ ‌ನಡೆಸುವ ಅಧಿಕಾರ ಎಸಿಬಿಗೆ ಇರುವುದರಿಂದ, ಲೋಕಾಯುಕ್ತ ಯಾವುದೇ ದಾಳಿ ನಡೆಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಎಸಿಬಿ ಸ್ಥಾಪಿಸಿದ ಬಳಿಕ ಲೋಕಾಯುಕ್ತ ಮಂಕಾಗಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಲೋಕಾಯುಕ್ತಕ್ಕೆ ಜೀವ ತುಂಬಬಹುದು ಎಂಬ ಭರವಸೆಯಿತ್ತು. ಆದರೆ, ಪ್ರಸ್ತುತ ಸರ್ಕಾರ ಕೂಡ ಲೋಕಾಯುಕ್ತ ಕಡೆಗೆ ಅಷ್ಟೊಂದು ಗಮನ ಹರಿಸಿಲ್ಲ. ಒಂದು ಸಮಯದಲ್ಲಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಸದ್ಯ ಹಲ್ಲಿಲ್ಲದ ಹಾವಿನಂತಾಗಿರುವುದಂತೂ ನಿಜ.

ABOUT THE AUTHOR

...view details