ಕರ್ನಾಟಕ

karnataka

ETV Bharat / state

ಯಾರೇ ಗೆದ್ರೂ, ಸೋತ್ರೂ ಅದು ಮಂಡ್ಯ ಜನರ ತೀರ್ಮಾನ: ಚೆಲುವರಾಯಸ್ವಾಮಿ - kannada news

ಸ್ನೇಹಿತರೊಬ್ಬರು ಊಟಕ್ಕೆ ಕರೆದಾಗ ಹೋಗಿದ್ದೇನೆ. ಅದಕ್ಕೆ ಅಷ್ಟೇನೂ ಮಹತ್ವ ಬೇಕಿಲ್ಲ ಎಂದು ಸುಮಲತಾ ಹಮ್ಮಿಕೊಂಡಿದ್ದರು ಎನ್ನಲಾದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿರುವ ಬಗ್ಗೆ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಸ್ಪಷ್ಠನೆ ನೀಡಿದರು.

ಡಿನ್ನರ್ ಪಾರ್ಟಿ ಬಗ್ಗೆ ಸ್ಪಷ್ಟಣೆ ನೀಡಿದ ಚಲುವರಾಯಸ್ವಾಮಿ

By

Published : May 3, 2019, 9:27 PM IST

ಬೆಂಗಳೂರು:ಕಾಂಗ್ರೆಸ್‌ ಪಕ್ಷವನ್ನು ದುರುಪಯೋಗ ಮಾಡಿಕೊಳ್ಳುವ ಯಾವ ಕೆಲಸವನ್ನೂ ನಾನು ಮಾಡಿಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುಮಲತಾ ಜೊತೆ ಡಿನ್ನರ್ ಪಾರ್ಟಿಯಲ್ಲಿ ಮಂಡ್ಯ ಕಾಂಗ್ರೆಸ್‌ನ ರೆಬೆಲ್‌ ನಾಯಕರು ಭಾಗಿಯಾಗಿದ್ದಾರೆ ಎನ್ನುವ ವಿಚಾರ‌‌ವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು. ಡಿನ್ನರ್ ಪಾರ್ಟಿ ಬಗ್ಗೆ ಮಾಹಿತಿ ಕೇಳಿದ್ದರು, ವಾಸ್ತವ ವಿಚಾರದ ಬಗ್ಗೆ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದರು.

ನಾವೆಲ್ಲೂ ಸುಮಲತಾ ಪರ ಕೆಲಸ ‌ಮಾಡಿಲ್ಲ, ಅಂತರ ಕಾಯ್ದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲೂ ಮೌನವಹಿಸಿದ್ದು ಬಿಟ್ಟರೆ ಅಪಪ್ರಚಾರ ಮಾಡಿಲ್ಲ. ಯಾರೇ ಗೆದ್ದರೂ, ಸೋತರೂ ಅದು ಮಂಡ್ಯ ಜನರ ತೀರ್ಮಾನವಾಗಿರುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.

ಡಿನ್ನರ್ ಪಾರ್ಟಿ ಬಗ್ಗೆ ಸ್ಪಷ್ಟಣೆ ನೀಡಿದ ಚೆಲುವರಾಯಸ್ವಾಮಿ

ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು 25 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಯಾರ ವಿರುದ್ಧವೂ ಕ್ಷುಲಕವಾಗಿ ಮಾತನಾಡಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ, ಅದ್ರೆ ಎಂದೂ ಆ ರೀತಿ ಒಬ್ಬರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿಲ್ಲ. ಅವರು ಮಾತನಾಡಿಕೊಳ್ಳಲಿ ಎಂದು ಸೂಚ್ಯವಾಗಿ ತಿಳಿಸಿದರು.

ABOUT THE AUTHOR

...view details